ಚೆಟ್ಟಳ್ಳಿ, ಜ. 7: ಚಂದ್ರಿಕಾ ದಿನ ಪತ್ರಿಕೆಯ 85 ನೇ ವಾರ್ಷಿಕೋತ್ಸವದ ಅಂಗವಾಗಿ ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ ಅವರಿಗೆ ‘ಚಂದ್ರಿಕಾ ಬ್ಯುಸಿನೆಸ್ ಎಕ್ಸಲೆಂಟ್’ ಪ್ರಶಸ್ತಿಯನ್ನು ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಹೈದರಲಿ ಶಿಹಾಬ್ ತಂಞಳ್ ನೀಡಿ ಗೌರವಿಸಿದರು.

ಕಣ್ಣೂರು ಇಂಟರ್‍ನ್ಯಾಷನಲ್ ಸೆಂಟರ್ ಹಾಲ್‍ನಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಸದರಾದ ಪಿ.ಕೆ. ಕುಜ್ಞಾಲಿ ಕುಟ್ಟಿ, ಕೆ. ಸುಧಾಕರನ್, ಶಾಸಕ ಎಂ.ಸಿ. ಕಮರುದ್ದೀನ್, ಪ್ರಮುಖರಾದ ಕೆ.ಪಿ.ಎ. ಮಜೀದ್, ಅಬ್ದುಲ್ ಖಾದರ್ ಮೌಲವಿ, ಪಿ. ಕುಜ್ಞಿ ಮುಹಮ್ಮದ್ ಸೇರಿದಂತೆ ಮತ್ತಿತರರು ಇದ್ದರು.