ಸಿದ್ದಾಪುರ, ಜ. 7: ಮಾಲ್ದಾರೆ ಗ್ರಾ.ಪಂ. ವತಿಯಿಂದ ಮಾಲ್ದಾರೆ ಪಟ್ಟಣದಲ್ಲಿ ಬಸ್ಸು ತಂಗುದಾಣವನ್ನು ಸಮಾಜಸೇವಕ ಎಂ.ಎಂ. ಮಿಟ್ಟು ನಂಜಪ್ಪ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಗ್ರಾ.ಪಂ. ಸಾರ್ವಜನಿಕರ ಅನುಕೂಲಕ್ಕಾಗಿ ಪಟ್ಟಣದಲ್ಲಿ ಬರ್ಶ ತಂಗುದಾಣ ನಿರ್ಮಾಣ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ರಾಣಿ, ಉಪಾಧ್ಯಕ್ಷ ಎಸ್.ಎಂ. ರಾಜು, ಗ್ರಾ.ಪಂ. ಸದಸ್ಯರುಗಳಾದ ಟಿ.ಆರ್. ಸತೀಶ್, ರಘು ಕರುಂಬಯ್ಯ, ಸಜಿ, ವಾರಿಜ, ಪದ್ಮ, ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಟಿ. ವಿಜು ಬಿದ್ದಪ್ಪ, ಕಲಾವಿದ ಭಾವ ಮಾಲ್ದಾರೆ ಹಾಜರಿದ್ದರು.