ಮಡಿಕೇರಿ, ಜ. 7: ಕರ್ನಾಟಕ ಸ್ಪೋಟ್ರ್ಸ್ ಡ್ಯಾನ್ಸ್ ಫೆಡರೇಶನ್, ನ್ಯಾಷನಲ್ ಡ್ಯಾನ್ಸ್ ಚಾಂಪಿಯನ್ ಶಿಪ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಕಿರಿಯರ ವಿಭಾಗ ದ ಭರತನಾಟ್ಯ ಸ್ಪರ್ಧೆಯಲ್ಲಿ ಕುಟ್ಟಂಡ ಭೂಮಿಕಾ ಕಾವೇರಪ್ಪ ಹಾಗೂ ಕುಟ್ಟಂಡ ತನಿಷಾ ಕಾವೇರಪ್ಪ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಅಮ್ಮತ್ತಿ ಕಾವಾಡಿ ಗ್ರಾಮದ ಕುಟ್ಟಂಡ ನಂದ ಅಪ್ಪಯ್ಯ ಅವರ ಮೊಮ್ಮಕ್ಕಳು. ಈ ವಿದ್ಯಾರ್ಥಿನಿಯರು ಅಮ್ಮತ್ತಿ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಗುರು ವಿಧೂಷಿ ಹೇಮಾವತಿ ಕಾಂತರಾಜ್ ಅವರ ಶಿಷ್ಯೆಯರು.