ಸೋಮವಾರಪೇಟೆ, ಜ. 7: ಸಮೀಪದ ಸುಂಟಿಕೊಪ್ಪ ಹೋಬಳಿ, ಗದ್ದೆಹಳ್ಳದಲ್ಲಿರುವ ವಿಶೇಷಚೇತನರು, ಅಬಲೆಯರು ಹಾಗೂ ಹಿರಿಯ ನಾಗರಿಕರ ಆಶ್ರಮವಾದ ವಿಕಾಸ್ ಜನಸೇವಾ ಟ್ರಸ್ಟ್ಗೆ ಪಟ್ಟಣ ಸಮೀಪದ ಶ್ರೀ ಶಾಸ್ತ ಯುವಕ ಸಂಘದ ಪದಾಧಿಕಾರಿಗಳು, ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಸಂಘದ ವತಿಯಿಂದ ಕೂಡುರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಮಂಡಲ ಪೂಜೋತ್ಸವಕ್ಕೆ, ಸಾರ್ವಜನಿಕ ಭಕ್ತಾದಿಗಳು ನೀಡಿದ ಕೊಡುಗೆಯಲ್ಲಿ ಉಳಿಕೆಯಾಗಿದ್ದ ಅಗತ್ಯ ಸಾಮಗ್ರಿಗಳನ್ನು ಆಶ್ರಮಕ್ಕೆ ನೀಡಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಹರೀಶ್, ಖಜಾಂಚಿ ಶಿವಕುಮಾರ್ ಸೇರಿದಂತೆ ಸದಸ್ಯರುಗಳು ಇದ್ದರು.