ಈ ತಿಂಗಳ ಕೊನೆಯ ದಿನ ಹಾಗೂ ಫೆಬ್ರವರಿ ತಿಂಗಳ ಮೊದಲ ದಿನ ಸೋಮವಾರಪೇಟೆ ಸಮೀಪದ ನಿಡ್ತ ಗ್ರಾಮದಲ್ಲಿ ನಡೆಯಲಿರುವ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಬಹುಭಾಷಾ ಸಾಹಿತಿ ನಾಗೇಶ್ ಕಾಲೂರು ಆಯ್ಕೆಯಾಗಿದ್ದಾರೆ.
ಮೂಲತಃ ಕಾಲೂರು ಗ್ರಾಮದ ಕೆ. ಎ. ನಾಗೇಶ್ ಅವರು ನಾಗೇಶ್ ಕಾಲೂರು ಎಂದೇ ಎಲ್ಲರಿಗೂ ಪರಿಚಿತರು ಕೃಷಿರಾಗಿರುವ ನಾಗೇಶ್ ಊರ ದೇಗುಲದಲ್ಲಿ ಅರ್ಚಕ ರಾಗಿಯೂ ಕರ್ತವ್ಯ ನಿರ್ವಹಿಸುತ್ತಾ ಬಂದವರು ಕನ್ನಡ ಎಂ.ಎ. ಪದವೀಧರರು, ಕನ್ನಡದೊಂದಿಗೆ ಕೊಡವ, ಅರೆಭಾಷೆ, ತುಳು ಭಾಷೆ ಗಳಲ್ಲೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಮನದ ಕದವನ್ನು ತೆರೆದು, ಭಾವದಲೆಗಳನ್ನೇರಿ, ಕವನ, ಸಂಕಲನಗಳು, ವಂದೇ ಮಾತರಂ, ಸ್ನೇಹಪಂಚಮಿ ಬಹುಭಾಷಾ ನಾಟಕಗಳು, ಬಾಳ್‍ಬಂಡಾಟ, ಪಾತಾಳ ಗಾಣ, ಮೂಡುಬೊಂಡು ಮೂಡಿ, ಆ ಮರ, ಕೆಣಿಯೋ ಕೆಣಿ, ಚಾಡಿಕಾರ ಚಂಗು ಇವು ಕೊಡವ ಭಾಷೆಯಲ್ಲಿ ಪ್ರಕಟಿತ ಪ್ರಸಾರಿತ ನಾಟಕಗಳು.
ಇವರ ಅನೇಕ ನಾಟಕಗಳು ಪ್ರಹಸನಗಳು ಕನ್ನಡ ಹಾಗೂ ಕೊಡವ ಭಾಷೆಗಳಲ್ಲಿ ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಶ್ರೀಕಾವೇರಿ ಸುಪ್ರಭಾತ, ಶ್ರೀಇಗ್ಗುತಪ್ಪ ಸುಪ್ರಭಾತ, ಶ್ರೀಕಾವೇರಿ ಕಥಾಮೃತ, ಶ್ರೀಕಾವೇರಿ ಗೀತಾಮೃತ, ದೇವಪಾಟ್, ಗೊಲ್‍ಪೊಯ್ಯನ, ಕೊಡವತಿರ ಮನಸ್ ಸೇರಿದಂತೆ ಇವರ ಹಲವಾರು ಧ್ವನಿ ಸುರುಳಿಗಳು ಹೊರ ಬಂದಿವೆ.
ಮಂಗಳೂರು ವಿಶ್ವವಿದ್ಯಾಲಯಕ್ಕಾಗಿ ಸರ್ಟಿಫಿಕೇಟ್ ಕೋರ್ಸ್ ಮತ್ತು ಡಿಪ್ಲೊಮಾ ಕೋರ್ಸಿಗಾಗಿ ಕೊಡವ ಸಂವಹನ ವಿಷಯದಲ್ಲಿ 2 ಪಠ್ಯ ಪುಸ್ತಕ ರಚನೆ ಮಾಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಗಾಗಿ ಜಾನಪದ ನಿಘಂಟು ಯೋಜನೆಗೆ ಕ್ಷೇತ್ರ ಸಹಾಯಕ ಕನಕ ಅಧ್ಯಯನ ಪೀಠಕ್ಕಾಗಿ ಕನಕದಾಸರು ಸಮಗ್ರಕಾವ್ಯ ರಚನೆ, ಕೊಡವ ಅಕಾಡೆಮಿ ಪ್ರಕಟಿಸಿದ ಕೊಡವ ಭಾರತಿ ಪಠ್ಯಪುಸ್ತಕದ ಸಂಪನ್ಮೂಲ ವ್ಯಕ್ತಿ.
ಮಡಿಕೇರಿ ಆಕಾಶವಾಣಿಯಲ್ಲಿ ಕೊಡವ ವಾರ್ತಾವಾಚಕರಾಗಿರುವ ನಾಗೇಶ್‍ಕಾಲೂರು, ಮಗಳು ವಿ.ವಿ. ಕೊಡವ ಸಾಂಸ್ಕøತಿಕ ಅಧ್ಯಯನ ಪೀಠದ ಗೌರವ ಸದಸ್ಯ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕವಿಗೋಷ್ಠಿಗಳಲ್ಲಿ ವಿಚಾರಗೋಷ್ಠಿಗಳಲ್ಲಿ ಭಾಗಿಯಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರಮಟ್ಟ ಕಥಾಕಮ್ಮಟ, ಲೇಖಕರ ಸಮ್ಮಿಲನದಲ್ಲಿ ಕೊಡವ ಭಾಷಾ ಪ್ರತಿನಿಧಿ ಕೊಡವ ಭಾಷಿಕ ಜನಾಂಗಗಳ ಸಾಂಸ್ಕøತಿಕ ಬದುಕು ಸಂಶೋಧನಾ ಗ್ರಂಥ ರಚಿಸಿದ್ದಾರೆ. ಶ್ರೀ ಭಗವದ್ಗೀತಾದರ್ಶನ (ಕೊಡವ) ಚೌಪದಿ ಮಹಾಕಾವ್ಯ ರಚನೆ. ಬಾನುಲಿಯಲ್ಲಿ ಕೊಡವ ಭಾಷೆಯಲ್ಲಿ ಪಳಮೆ ಪೊಮ್ಮಾಲೆ, ಪ್ರಹಸನ ಸರಣಿಯ 180 ಕಿರುನಾಟಕಗಳು, ಸಂಘರ್ಷ ರೇಡಿಯೋ ನಾಟಕ, ಗ್ರಾಮಾಯಣ 300 ಕಿರು ನಾಟಕಗಳು ಜನಪ್ರಿಯಗೊಂಡಿವೆ. ಹಳ್ಳಿ ರೇಡಿಯೋ ಕಾರ್ಯಕ್ರಮದಡಿ ಕೊಡಗಿನ ಸುಮಾರು 2000 ಗ್ರಾಮಗಳಲ್ಲಿ ರೇಡಿಯೋ ನೇರಪ್ರಸಾರದ ಪರಿಚಯಾತ್ಮಕ ಸರಣಿಯ ನಿರೂಪಕರಾಗಿ ಕಾರ್ಯನಿರ್ವಹಣೆ ಬರಹಗಾರ ಪತ್ರಕರ್ತ ಬಿ. ಜಿ. ಅನಂತಶಯನ ಅವರ ಚಿಂತನಗಳನ್ನು ಕೊಡವ ಭಾಷೆಗೆ ಅನುವಾದ ಮಾಡಿದ್ದಾರೆ. ಆಕಾಶವಾಣಿಯ ಉದಯ ರಾಗಗಳಿಗೆ ಹಾಡಿನ ರಚನೆ, ಇಂಗ್ಲಿಷ್‍ನಿಂದ ಕನ್ನಡ ಭಾಷೆಗೂ ಕೊಡವ ಭಾಷೆಗೂ ಹಲವು ಕೃತಿಗಳ ಅನುವಾದವನ್ನು ಮಾಡಿರುವ ನಾಗೇಶ್ ಅವರು ಕೊಡಗು ಕಂಡ ಅಪರೂಪದ ಬಹುಮುಖ ಪ್ರತಿಭೆ. ಇವರು ತಮ್ಮ ಸಾಹಿತ್ಯಿಕ ಸಾಧನೆಗಾಗಿ ಅನೇಕ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಚುಟುಕು ಸಾಹಿತ್ಯ ರಾಜ್ಯ ಪ್ರಶಸ್ತಿ, 82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಹಾಗೂ ಪ್ರಶಸ್ತಿ, ಮೈಸೂರು ದಸರಾ ರಾಜ್ಯಮಟ್ಟದ ಕವಿಗೋಷ್ಠಿ ಪುರಸ್ಕಾರ, ಕೊಡಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ರಾಜ್ಯ ಮಟ್ಟದ ಗೌರವ ಪ್ರಶಸ್ತಿ ಸಾಹಿತ್ಯಕ್ಕಾಗಿ ಹಿರಿಯ ನಾಗರಿಕರ ಇಲಾಖೆಯ ಮೂಲಕ ಕೊಡ ಮಾಡುವ ರಾಜ್ಯ ಪ್ರಶಸ್ತಿ 5ನೇಯ ಮಡಿಕೇರಿ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ, ದಟ್ಸ್ ಇಂಡಿಯಾ ಡಾಟ್ ಕಾಂ 2002ರಲ್ಲಿ ಜಾಗತಿಕ ಕನ್ನಡ ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ. ಹೀಗೆ ನಾಗೇಶ್ ಅವರು ಸಾಮಾಜಿಕ ರಂಗದಲ್ಲೂ ಸಾಹಿತ್ಯಿಕ ರಂಗದಲ್ಲೂ ಅಮೋಘ ಸಾಧನೆಯನ್ನು ಮಾಡಿ ಜನಮನ್ನಣೆ ಗಳಿಸುವ ಮೂಲಕ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ?ಯಮ್ಮಿ