ಮಡಿಕೇರಿ, ಜ. 7: ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ 6 ರಿಂದ 14 ವರ್ಷ ವಯೋಮಾನದ ಮಕ್ಕಳು, ಯಾವುದೇ ಶಾಲೆಗೆ ದಾಖಲಾಗದೆ ಮತ್ತು ಶಾಲೆಗೆ ದಾಖಲಾಗಿ ಶಾಲೆ ಬಿಟ್ಟ ಮಕ್ಕಳ ಸಮೀಕ್ಷಾ ಕಾರ್ಯ ತಾ. 6 ರಿಂದ ಪ್ರಾರಂಭಗೊಂಡಿದ್ದು, ತಾ. 20 ರವರೆಗೆ ನಡೆಯಲಿದೆ. ಈ ದಿನಗಳಲ್ಲಿ ಸಮೀಕ್ಷಾ ಕಾರ್ಯ ನಿರ್ವಹಿಸುತ್ತಿರುವ ಸಮೀಕ್ಷಾ ತಂಡದವರಿಗೆ ಮಾಹಿತಿ ನೀಡಿ, ಸಮೀಕ್ಷಾ ಕಾರ್ಯವು ಯಶಸ್ವಿಗೊಳ್ಳುವಲ್ಲಿ ಸಹಕರಿಸುವಂತೆ ಪೋಷಕರು ಮತ್ತು ಸಾರ್ವಜನಿಕರಲ್ಲಿ ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಕೋರಿದ್ದಾರೆ.