ಮಡಿಕೇರಿ, ಜ. 7: ಮಡಿಕೇರಿಯ ಕೋಟೆ ಮಹಿಳಾ ವಿವಿಧೋದ್ದೇಶ ಸಹಕಾರ ಸಮಾಜದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ನಿರ್ದೇಶಕರುಗಳ ಅವಿರೋಧ ಆಯ್ಕೆ ಆಗಿದೆ. ಸಾಮಾನ್ಯ ವರ್ಗದಿಂದ ಇಗ್ಗುಡ ಶಿವಕುಮಾರಿ ಗಣಪತಿ, ಎಂ.ಪಿ. ಲೀಲಾವತಿ, ಕುಸುಮಾ ಪ್ರಸಾದ್, ಸಿ.ಎ. ಮೀನಾಕ್ಷಿ, ಎಂ.ಎಂ. ಕಾವೇರಿ, ಚೆಟ್ರಂಡ ಸೀತಾ ಉತ್ತಪ್ಪ, ಸಿ.ಬೇಬಿ ಪೂವಯ್ಯ, ಮುಕ್ಕಾಟಿರ ಪ್ರೇಮಾ ಸೋಮಯ್ಯ, ಅರವಿಂದ ಅಣ್ಣಪ್ಪ, ಪರಿಶಿಷ್ಟ ಪಂಗಡ ವಿಭಾಗದಿಂದ ಎಂ.ಎಂ. ಧರ್ಮಾವತಿ, ಹಿಂದುಳಿದ ಪ್ರವರ್ಗ ‘ಎ’ ವಿಭಾಗದಿಂದ ಕಸ್ತೂರಿ ಗೋವಿಂದಮ್ಮಯ್ಯ, ಭಾರತಿ ರಮೇಶ್ ಅವರುಗಳು ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ವಿಭಾಗಕ್ಕೆ ಯಾರೂ ಕೂಡ ನಾಮಪತ್ರ ಸಲ್ಲಿಸದ ಕಾರಣ ಆ ಸ್ಥಾನ ಖಾಲಿ ಉಳಿದಿದೆ.