ಕೂಡಿಗೆ, ಜ. 7: ಕೂಡಿಗೆಯ ತಿರು ಕುಟುಂಬ ದೇವಾಲಯ (ಚರ್ಚ್)ದ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಜಿಲ್ಲೆಯ ವಿವಿಧ ಧರ್ಮ ಕೇಂದ್ರಗಳ ಗುರುಗಳ ಸಮ್ಮ್ಮುಖದಲ್ಲಿ ಚರ್ಚ್‍ಗೆ ಒಳಪಡುವ ಎಲ್ಲಾ ಗ್ರಾಮಗಳ ಭಕ್ತರು ಪ್ರಾರ್ಥನೆ ಸಲ್ಲಿಸಿದರು.

ಬಲಿಪೂಜೆಯು ಚಿಕ್ಕಮಗಳೂರು ಧರ್ಮಕ್ಷೇತ್ರದ ಮರಿಯನಗರದ ಫಾದರ್ ಪೌಲ್ ಅವರ ನೇತೃತ್ವದಲ್ಲಿ ನೆರವೇರಿತು. ನಂತರ ಏಸುವಿನ ವಿಗ್ರಹವನ್ನು ಭವ್ಯ ಅಲಂಕೃತ ಮಂಟಪದಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.

ವಾರ್ಷಿಕೋತ್ಸವದ ಅಂಗವಾಗಿ ಮುಖ್ಯರಸ್ತೆಯ ಬದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಈ ಸಂದರ್ಭ ಕೂಡಿಗೆ ಚರ್ಚ್‍ನ ಧರ್ಮಗುರು ಜಾನ್ ಡಿ ಗುನ್ನ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್‍ಗಳ ಧರ್ಮಗುರುಗಳು ಕುಶಾಲನಗರ ಮತ್ತು ಕೂಡಿಗೆ ವ್ಯಾಪ್ತಿಯ ಕ್ರೈಸ್ತಬಾಂಧವರು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ಚರ್ಚ್‍ನ ಆಡಳಿತ ಮಂಡಳಿ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.