‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರದೇವತಾಃ

ಯತ್ರಾಯತಸ್ತು ನಾ ಪೂಜ್ಯಂತೆ ಸರ್ವಾಷ್ಟ್ರ ಫಲ ಕ್ರಿಯಾ’

ಹೆಸರಾಂತ ಸಂಸ್ಕøತ ನುಡಿ. ಎಲ್ಲರು ಪಠ್ಯದಲ್ಲಿ ಓದಿ ತಿಳಿದವರೆ

ನಮ್ಮ ದೇಶ ಎಲ್ಲದರಲ್ಲು ವಿಭಿನ್ನತೆ, ಎಲ್ಲರಲ್ಲು ಏಕತೆ., ಎಲ್ಲರಿಗು ಸಮಾನತೆ ಕೊಟ್ಟಿದೆ. ಇದು ಹಿಂದಿನಿಂದ ಬಂದಿರುವ ಮೂಲಮಂತ್ರ, ಸ್ತ್ರೀಯನ್ನು ಪೂಜ್ಯನೀಯ ಭಾವನೆಯಲ್ಲಿ ಕಾಣುವುದರ ಜೊತೆಗೆ ಆಕೆಗೆ ರಕ್ಷಣೆ ಸಮಾಜದ ಧ್ಯೇಯ ಅದರೆ ಇಂದು ಆಕೆಗೆ ಕೈ ಎತ್ತಿ ಮುಗಿಯುತ್ತಿದ್ದ ನಾಗರಿಕತೆಯನ್ನು ಮರೆತು ಕೈ ಎಳೆದು ಮಾನಹರಣ ಮಾಡುವ ನೀಚ ಬುದ್ಧಿ ಬೆಳೆದಿದೆ. ವರದಿಗಳ ಪ್ರಕಾರ 15 ರಿಂದ 49 ವಯೋಮಾನದ ಶೇ. 30 ರಷ್ಟು ಮಹಿಳೆಯರು ದೈಹಿಕ ಹಿಂಸೆಯನ್ನು ಅನುಭವಿಸುತ್ತಿರುವುದು ಸಾಬಿತಾಗಿಸಿದ್ದು, ರಾಷ್ಟ್ರೀಯ ಕುಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ ಅದೇ ವಯೋಮಾನದ ಶೇ. 6 ಮಹಿಳೆಯರು ಲೈಂಗಿಕ ಹಿಂಸೆಗೆ ಒಳಗಾಗಿರುವುದಾಗಿ ಬಹಿರಂಗ ಪಡಿಸಿದೆ. ಈ ಕಾರಣದಿಂದಾಗಿ ಮಹಿಳೆಗೆ ಸುಕ್ಷಿತವಾದ ಜಾಗವೆ ಇಲ್ಲವೆ ಎಂಬ ಭಾವನೆ ಎಲ್ಲರಲ್ಲಿ ಮೂಡುವಂತೆ ಆಗಿದೆ. ಮನೆಯ ಹೊರಗಡೆ ಹೋಗುವ ಮಹಿಳೆಯರು ಸುರಕ್ಷತವಲ್ಲವೆಂದರೆ ಮನೆಯ ಒಳಗಿರುವವರು ಕೂಡ ಸುರಕ್ಷಿತರಲ್ಲ ಎಂಬುದಕ್ಕೆ ಕೆಲವಾರು ಘಟನೆಗಳೇ ಸಾಕ್ಷಿಯಾಗುತ್ತಿವೆ.

ಅತ್ಯಾಚಾರ ಹೇಯ ಅಪರಾಧವೆಂದು ಪರಿಗಣಿಸಲ್ಪಟ್ಟಿದೆ. ಅತ್ಯಾಚಾರಿಯು ಅಸಹಾಯಕ ಹೆಣ್ಣಿನ ಆತ್ಮವನ್ನು ವಂಚಿಸುತ್ತಾನೆ. ಅವಮಾನಿಸುತ್ತಾನೆ, ಕಲುಷಿತಗೊಳಿಸುತ್ತಾನೆ.

ಮಹಿಳೆಯರ ಮೇಲಿನ ಲೈಂಗಿಕ ಶೋಷಣೆಗಳು ದೌರ್ಜನ್ಯಗಳು ನಮ್ಮ ದೇಶದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಲೈಂಗಿಕ ಪೀಡನೆ, ಚುಡಾಯಿಸುವಿಕೆ, ದುರಾಚಾರ, ವೈವಾಹಿಕ ದೈಹಿಕ ಹಿಂಸೆ ಹಾಗೂ ಗೃಹ ಕೃತ್ಯದಂತಹ ಅನಾಚಾರಗಳನ್ನೂ ಒಳಗೊಂಡಿದೆ. ಈ ಪೈಕಿ ಈ ಕೃತ್ಯಕ್ಕೆ ಒಳಗಾದ ಮಹಿಳೆ ಪಾಪ ಪ್ರಜ್ಞೆಯಿಂದಲೋ, ಸಾಮಾಜಿಕ ಕಳಂಕಕ್ಕೆ ಹೆದರಿಯೋ ಇಲ್ಲವೆ ಭಯದಿಂದಲೋ, ಖಿನ್ನತೆ ಯಿಂದಲೋ ಇಂಥಹ ಹತ್ತು ಹಲವು ಕಾರಣಗಳಿಂದ ಸಮಾಜಕ್ಕೆ ಹೆದರಿ ಇದನ್ನು ಮುಚ್ಚಿಡುತ್ತಾಳೆ. ಅದು ಹೇಳಲಾಗದ ಕೇಳಲು ಆಗದ ಹೆಣ್ಣಿನ ಮಾನಸಿಕ ಜರ್ಜರಿತ ಪರಿಸ್ಥಿತಿ ಎಂದರೂ ತಪ್ಪಾಗಲಾರದು.

ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಸಂಬಂಧಿಸಿದ ಪ್ರಕರಣಗಳು ತಾರಕಕ್ಕೆರುತ್ತಿದ್ದು, ಬಹುತೇಕ ಸಂದರ್ಭಗಳು ಬಹುವಾಗಿ ಬೆಳಕಿಗೆ ಬಾರದಂತೆ ಪರ್ಯಾವಸನವಾದರೆ ಇನ್ನು ಹಲವು ಕೊಲೆಯಲ್ಲಿ ಕೊನೆಗೊಳ್ಳುತ್ತಿವೆ. ಹಾಗೆಂದು ಕೃತ್ಯ ಎಸಗುವವನು ತೀರಾ ಅಪರಿಚಿತನೆ ಎಂದುಕೊಳ್ಳು ವಂತೆಯೂ ಇಲ್ಲ. ಏಕೆಂದರೆ ಆತ ಪರಿಚಯದವನಾಗಿದ್ದು ಕೃತ್ಯ ಎಸಗಿ ನಂಬಿಕೆಯಿಂದ ಕತ್ತು ಕುಯ್ದಿರುತ್ತಾನೆ. ಇನ್ನು ಶಾಲಾ ಹಂತದಲ್ಲೂ ಅಷ್ಟೆ ಕೆಲವು ವಿದ್ಯಾರ್ಥಿಗಳು ವಿದ್ಯೆ ಕಲಿಸುವ ಗುರುಗಳಿಂದಲೆ ಲೈಂಗಿಕ ಶೋಷಣೆಗೆ ಒಳಗಾಗುತ್ತಿರುವುದು ತೀರಾ ದುಸ್ತರ ಸಂಗತಿ. ರಾಜಂದಿರ ಕಾಲದಲ್ಲಿ ಆಕ್ರಮಣವೆಸಗಿದ ಪರದೇಶಿಗಳಿಂದ ಹೆಣ್ಣನ್ನು ರಕ್ಷಿಸಲು ಆಕೆಯನ್ನು ಮನೆಯಲ್ಲಿ ಕೂಡಿ ಹಾಕಲಾಗುತ್ತಿತ್ತು. ಪ್ರÀಸ್ತುತ ಸನ್ನಿವೇಶಗಳ ಪ್ರಕಾರ ಕ್ರೂರ ಮೃಗಗಳಿಗಿಂತಲು ವಿಕೃತವಾಗಿ, ಮಾನವೀಯತೆ ಮರೆತು ವರ್ತಿಸುವ ನರನಿಂದ ರಕ್ಷಿಸಲು ಆಕೆಯನ್ನು ಮನೆಯಲ್ಲಿ ಕೂಡಿ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ. ಮನೆಯಿಂದ ಹೊರ ಹೋದ ಹೆಣ್ಣು ಮಕ್ಕಳಿಗೆ ಸಾರ್ವಜನಿಕ ರಕ್ಷಣೆಯ ಖಾತರಿ ಇಲ್ಲದಂತಾಗಿದೆ.

ಇಂಥಹ ಕೃತ್ಯ ಎಸಗುವ ಅಪರಾಧಿಗಳನ್ನು ಮರಣ ದಂಡನೆ ಇಲ್ಲವೆ ಪಾಸಿಗೆ ನೀಡಿ ಮತ್ತೆ ಇಂಥಹ ಸ್ಥಿತಿ ನಿರ್ಮಾಣವಾಗದ ಹಾಗೆ ಮಾಡು ವುದು ಕಾನೂನಿನ ಕೈಯಲ್ಲೇ ಇದೆ. ಕೆಲ ದಿನಗಳ ಪ್ರತಿಭಟನೆ, ಮೆರವಣಿಗೆ, ಹೋರಾಟ ನಡೆಯುತ್ತದೆ, ನ್ಯಾಯ ಪೀಠದ ಕಟಕಟೆಯಲ್ಲಿ ಮನಸಿನಿಂದ ಮಾಸುವವರೆಗೆ ವಿಚಾರಣೆ ನಡೆಸಿ, ಟೀಕಾಕಾರರು ಇದರ ಬಗ್ಗೆ ಟೀಕಿಸಿ, ಬುದ್ಧಿ ಜೀವಿಗಳು ಇದನ್ನು ವಿಮರ್ಶಿಸಿ ಕಟ್ಟಕಡೆಗೆ ಹೆಣ್ಣನ್ನೇ ಸಂಶಯಿಸಲ್ಪಡುತ್ತದೆ. ಹಾಗೂ ಒಂದು ವೇಳೆ ಆರೋಪ ಸಾಬೀತಾದ ಪಕ್ಷದಲ್ಲಿ ಕೆಲವು ಸಾವಿರದಂಡ ಕೆಲವು ವರ್ಷಗಳ ಜೈಲು ಶಿಕ್ಷೆಯೋ, ಹೆಚ್ಚೆಂದರೆ ಜೀವಾವಧಿ ಶಿಕ್ಷೆ ಈ ನೀತಿ ಬದಲಾಗಬೇಕಿದೆ.

ಇದೀಗ 2012 ನಿರ್ಭಯಾ ವಿಷಯದಲ್ಲೂ ಬರೋಬ್ಬರಿ 7 ವರುಷಗಳ ವಿಚಾರಣೆ ನಡೆಸಿ ಆರೋಪಿಗಳು ಕ್ಷಮಾದಾನದವರೆಗೂ ತಲುಪಿದ್ದಾರೆ. ಸಮಾಜದಲ್ಲಿ ಇಂದು ಗಂಡು ಹುಟ್ಟಿತೆಂದು ಸಿಹಿ ಹಂಚಿ ಸಂತಸ ಪಡುವ ಬದಲು ಅವರಲ್ಲಿ ಶಿಸ್ತನ್ನು, ಹೆಣ್ಣು ಮಕ್ಕಳಿಗೆ ಉಡುಗೆ-ತೊಡುಗೆಯಲ್ಲಿ ಸಭ್ಯತೆಯನ್ನು ಕಲಿಸುವ ಕೆಲಸವಾಗಬೇಕಿದೆ. ಸ್ವಸ್ಥ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಬೋಧಿಸುವ ಪಾಠವನ್ನು ಗಂಡು ಮಕ್ಕಳಿಗೂ ಬೋಧಿಸಬೇಕು ಹೆಣ್ಣಿಗೆ ಇಲ್ಲ-ಸಲ್ಲದ ಬೇಲಿ ಹಾಕುವ ಬದಲು ಗಂಡು ಮಕ್ಕಳಲ್ಲೂ ಅಂಕುಶವನ್ನು ತರಬೇಕು ಹೆಣ್ಣು ಮಕ್ಕಳನ್ನು ಸಹೋದರತೆಯಲ್ಲಿ ಕಾಣದಿದ್ದರೂ ಅವರನ್ನು ಕಾಡಿಸುವ ರಕ್ಕಸರಾಗದಿರಿ ಎಂದು ತಿಳಿ ಹೇಳಬೇಕು. ದಿನಗಳ ಹಿಂದೆ ನಡೆದ ದಿಶಾ ಅವರ ಪ್ರಕರಣದಲ್ಲಿ ಅತ್ಯಾಚಾರಿ ಗಳನ್ನು ಎನ್‍ಕೌಂಟರ್ ಮಾಡುವ ಮೂಲಕ ಪಾತಕಿಗಳಿಗೆ ದಿಟ್ಟ ಸಂದೇಶ ರವಾನೆಯಾಗಿದ್ದು ಇದಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಯೊಂದಿಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಮುಂದೆಯು ಇಂಥಹ ಕುಕೃತ್ಯ ಗಳಿಗೆ ವಿಚಾರಣೆ, ವಾದ, ವಕೀಲ, ಸಾಕ್ಷಿ ಎಂದು ದಿನದೂಡದೆ ತ್ವರಿತಗತಿ ಯಲ್ಲಿ ಶಿಕ್ಷೆಯಾಗಬೇಕಿದೆ. ?ಇಟ್ಟಿರ ಉತ್ತಪ್ಪ ಸುಬ್ರಮಣಿ

ಹರಿಹರ-ಮುಗುಟುಗೇರಿ