ಕುಶಾಲನಗರ, ಜ. 6: ರಾಜಸ್ಥಾನದ ಜೈಪುರ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಸಾವಯವ ರಸಾಯನಶಾಸ್ತ್ರ ವಿಭಾಗದಲ್ಲಿ ನಡೆದ ಇಂಡಿಯನ್ ಕೌನ್ಸಿಲ್ ಆಫ್ ಕೆಮಿಸ್ಟ್ರೀಸ್ ವಾರ್ಷಿಕ ಸಮ್ಮೇಳನದಲ್ಲಿ ಪೆÇ್ರ. ಡಾ. ಅಶೋಕ್ ಮತ್ತು ಡಾ. ಎಂ. ಸರಸಿಜ ಅವಾರ್ಡ್ -2019 ಹೆಸರಿನಲ್ಲಿ ನಡೆದ ಬೆಸ್ಟ್ ಓರಲ್ ಪ್ರೆಸೆಂಟೆಶನ್ಗೆ ಕೂಡ ಮಾಡುವ 'ಬೆಸ್ಟ್ ಯಂಗ್ ವುಮೆನ್ ಸೈಂಟಿಸ್ಟ್' ಅವಾರ್ಡ್ಗೆ ಕುಶಾಲನಗರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿನ ರಸಾಯನಶಾಸ್ತ್ರ ವಿಭಾಗದಲ್ಲಿನ ಅತಿಥಿ ಉಪನ್ಯಾಸಕಿಯಾಗಿರುವ ಎಚ್.ಎ.ನಗ್ಮಾಬಾನು ಅವರು ಭಾಜನರಾಗಿದ್ದಾರೆ. ಕೊಡ್ಲಿಪೇಟೆಯ ಅಬ್ಬಾಸ್ ಮತ್ತು ನಸ್ರೀನ್ ದಂಪತಿಗಳ ಪುತ್ರಿಯಾದ ನಗ್ಮಾಬಾನು ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪೆÇ್ರ.ಬಾಲಕೃಷ್ಣ ಕಲ್ಲುರಾಯ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿನ ರಸಾಯನಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.