ನಾಪೆÇೀಕ್ಲು, ಜ. 6 : ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದೇಶದ ಹೆಸರು ಗಳಿಸಿದ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲೆ ಡಾ, ಅವನಿಜಾ ಸೋಮಯ್ಯ ಸಾವಿತ್ರಿಬಾಯಿ ಫುಲೆ ಅವರ ಸಾಧನೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಪಿ.ಕೆ. ನಳಿನಿ, ಶಿಕ್ಷಕ ಮಾದೇಶ್ ಮತ್ತಿತರರು ಇದ್ದರು.
ಕೂಡಿಗೆಯಲ್ಲಿ
ಇಲ್ಲಿನ ಸದ್ಗುರು ಅಪ್ಪಯ್ಯ ಸ್ವಾಮಿ ಫ್ರೌಢಶಾಲೆಯ ವತಿಯಿಂದ ಸಾವಿತ್ರಿ ಫುಲೆ ಅವರ ಜನ್ಮದಿನ ನಡೆಯಿತು. ಶಾಲಾ ಮುಖ್ಯ ಶಿಕ್ಷಕ ದುರ್ಗೇಶ ಮಾತಾನಾಡಿ ಸಾವಿತ್ರಿ ಫುಲೆ ಹೋರಾಟದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಹಾಜರಿದ್ದರು.