ಸುಂಟಿಕೊಪ್ಪ, ಜ. 6: ನೆರೆಯವರ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಸುಂಟಿಕೊಪ್ಪ ಠಾಣೆಯ ಎಎಸ್‍ಐ ಶಿವಪ್ಪ ಸೂರ್ಯ ಸ್ತ್ರೀಶಕ್ತಿ ಆಯೋಜಿಸಿದ್ದ ಹೊಸ ವರುಷದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ದರು. ಮಧುರಮ್ಮ ಬಡಾವಣೆಯ ಪಂಪ್ ಹೌಸ್ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ ಸೂರ್ಯ ಸ್ತ್ರೀ ಶಕ್ತಿ ಸಂಘದ ವತಿಯಿಂದ ಆಯೋಜಿ ಸಿದ್ದ ಆಚರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ತ್ರೀ ಶಕ್ತಿ ಸಂಘಟನೆಯಿಂದ ಸಮಾಜದಲ್ಲಿ ಮಹಿಳೆಯರು ಸಬಲರಾಗಿದ್ದಾರೆ. ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸಹಾಯ ಹಸ್ತ ನೀಡಿ ಸಾಂತ್ವನ ಹೇಳುವ ಧೈರ್ಯ ತುಂಬುವ ಕೆಲಸ ಮಹಿಳೆಯರಿಂದಲೇ ಆಗಬೇಕೆಂದರು. ನೆರೆಯವರ ಕಷ್ಟಗಳಿಗೆ ಸ್ಪಂದಿಸಿ ಆತ್ಮಸಾಕ್ಷಿಯಾಗಿ ಬದುಕು ನಡೆಸಿದರೆ ಸಂಘಟನೆಯು ಸಧೃಡವಾಗಿ ಬೆಳೆಯಲು ಸಾಧ್ಯವೆಂದು ಶಿವಪ್ಪ ಹೇಳಿದರು. ಸಮಾರಂಭದ ವೇದಿಕೆ ಯಲ್ಲಿ ಗ್ರಾ. ಪಂ. ಸದಸ್ಯ ರಜಾಕ್, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್.ರವಿ, ಕಾರ್ಮಿಕ ಸಂಘದ ಸ್ಥಾಪಕ ಅಧ್ಯಕ್ಷ ಅಣ್ಣಾ ಶರೀಫ್, ತಾಲೂಕು ಒಕ್ಕೂಟ ಸದಸ್ಯೆ ಕಮಲಮ್ಮ ಹಾಗೂ ಸಂಘದ ಸೂರ್ಯ ಸ್ತ್ರೀಶಕ್ತಿ ಸಂಘದ ಪ್ರತಿನಿಧಿಗಳಾದ ಪ್ರೇಮ, ಪೂರ್ಣಿಮ, ಭೂಮಿಕ ಸ್ತ್ರೀಶಕ್ತಿ ಮುನಿಯಮ್ಮ, ಜನನಿ ಸ್ವಸಹಾಯ ಸ್ತ್ರೀಶಕ್ತಿ ಸಂಘದ ಚಾಂದು ಉಪಸ್ಥಿತರಿ ದ್ದರು. ಎಎಸ್‍ಐ ಶಿವಪ್ಪ ಹಾಗೂ ಅತಿಥಿಗಳು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಚಾಲನೆ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಸೆಲಿನಾ ಸ್ವಾಗತಿಸಿ, ನಿವೃತ್ತ ಅಂಗನವಾಡಿ ಶಿಕ್ಷಕಿ ಶಾಂತಿ ನಂಜುಂಡ ನಿರೂಪಿಸಿ, ವಂದಿಸಿದರು.