ಮಡಿಕೇರಿ: ‘ಶಿಕ್ಷಣ ಜ್ನಾನ’ ಮಾಸಿಕ ಪತ್ರಿಕೆಯ 17ನೇ ವರ್ಷದ ವಾರ್ಷಿಕೋತ್ಸವ ಮತ್ತು ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನದ ಸಮಾರಂಭ ಇತ್ತೀಚೆಗೆ ಕಲಬುರ್ಗಿಯಲ್ಲಿ ನಡೆಯಿತು. ಇಲ್ಲಿನ ಸರ್ದಾರ್ ವಲ್ಲಭ ಬಾಯಿ ವೃತ್ತದ ಸಮೀಪವಿರುವ ಕನ್ನಡ ಭವನದಲ್ಲಿ ಕೊಡಗಿನ ವಿವಿಧ ಶಿಕ್ಷಕರು ಮತ್ತು ಓರ್ವ ಉಪನ್ಯಾಸಕರು ಈ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ದೇವಾಲಯ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಎಂ. ಮಂಜುಳ ಇವರು ‘ಜ್ಞಾನ ಚಿಗುರು ಕವಚ’, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸೆಲೆಸ್ಟಿನ್ ಲೋಬೊ ಅವರು ‘ಜ್ಞಾನ ಜ್ಯೋತಿ’ ಪ್ರಶಸ್ತಿ ಸ್ವಿಕರಿಸಿದರು.

ಶ್ರೀಮಂಗಲ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಹೆಚ್.ಬಿ. ರತ್ನಮ್ಮ ಅವರು ‘ಜ್ಞಾನ ಸಿಂಧು’ ಪ್ರಶಸ್ತಿಯನ್ನು ಹಾಗೂ ಪದವಿಪೂರ್ವ ವಿಭಾಗದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಧ್ಯಾಪಕ ತಿರುಮಲ್ಲಯ್ಯ ಅವರು ‘ಜ್ಞಾನ ಸಂಜೀವಿನಿ’ ಪ್ರಶಸ್ತಿಯನ್ನು ಸ್ವೀಕರಿಸಿದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಬೀದರ್ ಜಿಲ್ಲೆಯ ಬಸವ ಕಲ್ಲಾಣ ತಾಲೂಕಿನ ಶ್ರೀ ಕ್ಷೇತ್ರ ಹಾರಕೂಡÀ ಸಂಸ್ಥಾನ ಹಿರೇಮಠದ ಸ್ವಾಮೀಜಿಗಳಾದ ಶ್ರೀ ಚನ್ನವೀರ ಶಿವಚಾರ್ಯ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ವಿಧಾನ ಪರಿಷತ್‍ನ ಮಾಜಿ ಸದಸ್ಯ ಶಶಿಲ್ ಜಿ. ನಮೋಶಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಲಬುರ್ಗಿಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ಸಿ. ರೇವೂರ್ ನೆರವೇರಿಸಿ ಮಾತನಾಡಿದರು. ಕೊಡಗು ಜಿಲ್ಲೆ ಆಯ್ಕೆ ಸಮಿತಿಯ ಅಧ್ಯಕ್ಷ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಡಿ. ಕೃಷ್ಣಚೈತನ್ಯ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.*ಗೋಣಿಕೊಪ್ಪಲು: ಅತ್ಯುತ್ತಮ ಬೋಧನ ಗುಣಮಟ್ಟ ಮತ್ತು ಫಲಿತಾಂಶಕ್ಕಾಗಿ ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆ ಉತ್ತಮ ಶಾಲಾ ಪ್ರಶಸ್ತಿ ಪಡೆದುಕೊಂಡಿದೆ.

ಕಲ್ಬುರ್ಗಿಯ ಸರ್ದಾರ್ ವಲ್ಲಭಬಾಯಿ ವೃತ್ತದಲ್ಲಿರುವ ಕನ್ನಡ ಭವನದಲ್ಲಿ ನಡೆದ ‘ಶಿಕ್ಷಣ ಜ್ಞಾನ’ ಮಾಸಿಕ ಪತ್ರಿಕೆಯ 17ನೇ ವರ್ಷದ ವಾರ್ಷಿಕೋತ್ಸವ ಮತ್ತು ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವ ಪ್ರಶಸ್ತಿಯನ್ನು ನೀಡಲಾಗಿದೆ. ಶಾಲೆಯ ವಿಜ್ಞಾನ ಮತ್ತು ಪರಿಸರ ಸಂಘಗಳ ಚಟುವಟಿಕೆಗಳು, ಶಾಲೆಯಲ್ಲಿರುವ ವಿವಿಧ ಸವಲತ್ತು, ಪೋಷಕ-ಶಿಕ್ಷಕ-ವಿದ್ಯಾರ್ಥಿಗಳ ಸಂಬಂಧ, ಆಟದ ಮೈದಾನ, ಶೌಚಾಲಯ ವ್ಯವಸ್ಥೆ, ನೀರಿನ ಸಂಪರ್ಕ ಮುಂತಾದವುಗಳನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಶಾಲೆಯ ವಿಜ್ಞಾನ ಶಿಕ್ಷಕರಾದ ಡಿ. ಕೃಷ್ಣಚೈತನ್ಯ ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಶ್ರೀ ಕ್ಷೇತ್ರ ಹಾರಕೂಡÀ ಸಂಸ್ಥಾನ ಹಿರೇಮಠದ ಸ್ವಾಮೀಜಿಗಳಾದ ಶ್ರೀ ó ಚನ್ನವೀರ ಶಿವಚಾರ್ಯ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ವಿಧಾನ ಪರಿಷತ್‍ನ ಮಾಜಿ ಸದಸ್ಯ ಶಶಿಲ್ ಜಿ. ನಮೋಶಿ ಕಾರ್ಯಕ್ರಮ ಉದ್ಘಾಟನೆಯನ್ನು ಕಲಬುರ್ಗಿಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ಸಿ. ರೇವೂರ್ ನೆರವೇರಿಸಿದರು. ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯ ಆಡಳಿತ ಮಂಡಳಿಯ ಪಟ್ರಪಂಡ ಕೆ. ಚಿಣ್ಣಪ್ಪ, ಕಾರ್ಯದರ್ಶಿ ಕುಪ್ಪಂಡ ಎಂ. ತಿಮ್ಮಯ್ಯ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳು ಹಾಜರಿದ್ದರು.