ಮಡಿಕೇರಿ, ಜ. 5 : ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಮಡಿಕೇರಿ ನಗರ ಬಿಜೆಪಿ ಘಟಕದಿಂದ ಜಾಗೃತಿ ಕಾರ್ಯಕ್ರಮ ನಡೆಯಿತು. ಮಹದೇವಪೇಟೆಯಲ್ಲಿ ಮನೆ ಮನೆಗೆ ತೆರಳಿ ಶಾಸಕತ್ರಯರು ಪೌರತ್ವ ಕಾಯಿದೆ ಉದ್ದೇಶ ಮತ್ತು ಪ್ರಯೋಜನದ ಬಗ್ಗೆ ಮನವರಿಕೆ ಮಾಡಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ಯಾವುದೇ ಕಾರಣಕ್ಕೂ ಕಾಯಿದೆ ದೇಶ ವಾಸಿಗಳ ಪೌರತ್ವ ಕಸಿಯುವುದಿಲ್ಲ ಎಂದರು. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಾಯ್ದೆ ತಿದ್ದುಪಡಿ ಪ್ರಸ್ತಾಪಗೊಂಡು ಅನುಮೋದನೆ ಪಡೆಯುವಾಗ ವಿರೋಧಿಸದ ಪಕ್ಷಗಳು ಇದೀಗ ಅಶಾಂತಿ ಮೂಡಿಸುತ್ತಿರುವುದು ಸರಿಯಲ್ಲ ಎಂದರು.

ವಿಧಾನ ಪರಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಜವಾಹರ ಲಾಲ್ ನೆಹರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕಾಯ್ದೆ ಬಗ್ಗೆ ಪ್ರಸ್ತಾಪವಾಗಿತ್ತು. ನಂತರ ಕೆಲ ತಿದ್ದುಪಡಿ ಕೂಡ ಆಗಿದೆ. ಈ ಕಾಯ್ದೆ ಬಗ್ಗೆ ಯಾರು ಭಯಪಡಬೇಕಾಗಿಲ್ಲ ಎಂದರು. ಅಲ್ಪಸಂಖ್ಯಾತ ಘಟಕದ ಮುಖಂಡ ಮೊಯ್ದು ಮಾತನಾಡಿ, ಮಂಗಳೂರುನಲ್ಲಿ ನಡೆದ ಗಲಭೆÉ ಕೋರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ದರು.

ಈ ಸಂಧರ್ಭ ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ಮಾಜಿ ಅಧ್ಯಕ್ಷ ಮಹೇಶ್ ಜೈನಿ, ಪ್ರಮುಖರಾದ ಉಣ್ಣಿಕೃಷ್ಣ, ಮುರುಗೇಶ್, ಸತೀಶ್, ಶಿವಕುಮಾರ್, ಸವಿತಾ ರಾಕೇಶ್, ಅನಿತಾ ಪೂವಯ್ಯ ಸೇರಿದಂತೆ ಇನ್ನಿತರರು ಇದ್ದರು.

ಕುಶಾಲನಗರ: ಬಿಜೆಪಿ ಸರಕಾರ ಜಾರಿಗೊಳಿಸಿರುವ ಪೌರತ್ವ ತಿದ್ದಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಅಭಿಯಾನ ಕುಶಾಲನಗರದಲ್ಲಿ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಪಟ್ಟಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ಕಾಯ್ದೆ ಅನುಕೂಲತೆಗಳ ಬಗ್ಗೆ ಮನದಟ್ಟು ಮಾಡಿಕೊಟ್ಟರು. ಸಾರ್ವಜನಿಕರು, ಅಂಗಡಿ ಮುಂಗಟು ್ಟಗಳ ಸೇರಿದಂತೆ ಮನೆಮನೆಗೆ ತೆರಳಿ ಕರಪತ್ರಗಳನ್ನು ಹಂಚಲಾಯಿತು.

ಈ ಬಗ್ಗೆ ಮಾತನಾಡಿದ ಬಿ.ಬಿ.ಭಾರತೀಶ್, ಪೌರತ್ವ ಕಾಯ್ದೆ ತಿದ್ದುಪಡಿ ಬಗ್ಗೆ ಅಪಪ್ರಚಾರ ಮಾಡಿ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ. ಬಿಜೆಪಿ ವಿರೋಧಿಗಳು ಇಲ್ಲಸಲ್ಲದ ತಪ್ಪು ಮಾಹಿತಿ ನೀಡಿ ಕಾಯ್ದೆ ಬಗ್ಗೆ ಹೋರಾಟ ಕೈಗೊಳ್ಳಲು ಪ್ರೇರೇಪಿಸುತ್ತಿ ದ್ದಾರೆ. ತಾ. 17 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಕಾಯ್ದೆ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಅರಿವು ಮೂಡಿಸಲಾಗುವುದು ಎಂದರು.

ಈ ಸಂದರ್ಭ ಪಪಂ ಸದಸ್ಯರಾದ ಅಮೃತ್‍ರಾಜ್, ಜಯವರ್ಧನ, ಯುವಮೋರ್ಚಾ ತಾಲೂಕು ಕಾರ್ಯಾಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಪಕ್ಷದ ಮುಖಂಡರಾದ ಸತ್ಯನಾರಾಯಣ, ವಿ.ಡಿ.ಪುಂಡರೀಕಾಕ್ಷ, ಎಂ.ಎ.ಚರಣ್, ಉಮಾಶಂಕರ್, ವೈಶಾಖ್, ಡಿ.ಆರ್.ಸೋಮಶೇಖರ್, ಆದರ್ಶ, ದಿನೇಶ್ ಮತ್ತಿತರರು ಇದ್ದರು.