ಪೊನ್ನಂಪೇಟೆ, ಜ. 5: ರಾಷ್ಟ್ರಕವಿ ಕುವೆಂಪು ಅವರ ಹುಟ್ಟುಹಬ್ಬದ ಅಂಗವಾಗಿ ಗೋಣಿಕೊಪ್ಪಲು ಸಮೀಪದ ಮಾಯಮುಡಿ ಬಳಿಯ ಬೆಮ್ಮತ್ತಿಯಲ್ಲಿ ಸಹಭೋಜನ ನಡೆಯಿತು. ಬೆಮ್ಮತ್ತಿಯ ಕಾಫಿ ಬೆಳೆಗಾರ ಕೆ.ಎಂ. ಅಬ್ದುಲ್ ರಹಿಮಾನ್ ಅವರ ತೋಟದ ಆವರಣದಲ್ಲಿ ನಡೆದ ಸಹ ಭೋಜನ ಕಾರ್ಯಕ್ರಮದಲ್ಲಿ ವಿವಿಧ ಜನಾಂಗದವರು ಪಾಲ್ಗೊಂಡಿದ್ದರು. ಸಹಭೋಜನಕ್ಕೆ ಮೊದಲು ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ವಾಚಿಸಿ ಪ್ರತಿಜ್ಞೆ ಕೈಗೊಳ್ಳಲಾಯಿತು.

ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಕೆ.ಎಂ. ಅಬ್ದುಲ್ ರಹಿಮಾನ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ನೂತನ ಅಧ್ಯಕ್ಷ ಕೋದಂಡ ಸಂಪನ್ ಸೋಮಣ್ಣ, ಗೋಣಿಕೊಪ್ಪಲು ಗ್ರಾಮ ಪಂಚಾಯತಿ ಸದಸ್ಯ ಜೆ.ಕೆ.ಸೋಮಣ್ಣ, ಮುರುಗ, ವಕೀಲ ಸಮೀರ್, ಗುತ್ತಿಗೆದಾರ ವಿ.ಲವೀಶ್, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಅಬ್ದುಲ್ ಸಮದ್, ರಶೀದ್ ಮೊದಲಾದವರು ಪಾಲ್ಗೊಂಡಿದ್ದರು.