ಮಡಿಕೇರಿ, ಜ. 5: ಇತ್ತೀಚೆಗೆ ವಿಜಯಪುರದ ವನಶ್ರೀ ಕಲ್ಯಾಣ ಮಂಟಪದಲ್ಲಿ ರಾಜ್ಯ ಮಟ್ಟದ ವಚನ ವಿಜಯೋತ್ಸವ ಹಾಗೂ ಬಸವೇಶ್ವರ ಕರ್ಮವೀರ ಕಲಾ, ಸಾಹಿತ್ಯ, ಸಂಸ್ಕೃತಿ ವೇದಿಕೆಯ 15ನೇ ವಾರ್ಷಿಕೋತ್ಸವ ಸಮಾರಂಭ ಜರುಗಿತು. ಈ ಸಂದರ್ಭ ವೀರಾಜಪೇಟೆಯ ಎಂ.ಡಿ. ಆಯುಷ್ಗೆ ಬಸವಜ್ಯೋತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.