vಸಾಂಬಾರು ಮಾಡುವಾಗ ಸಾಂಬಾರು ಪುಡಿಯೊಂದಿಗೆ ಎರಡು ಲವಂಗ, ಏಲಕ್ಕಿ, ಚಕ್ಕೆ, ಅರೆದು ಹಾಕಿದರೆ ರುಚಿ ಹೆಚ್ಚುತ್ತದೆ.
v ಟೊಮೆಟೋ ಕತ್ತರಿಸಿ ಬಿಸಿಲಲ್ಲಿ ಒಣಗಿಸಿ, ಪುಡಿ ಮಾಡಿಟ್ಟುಕೊಂಡರೆ ಅಗತ್ಯವಿದ್ದಾಗ ಅಡುಗೆಗೆ ಬಳಸ ಬಹುದು.
v ಬಟ್ಟಲು ಅಡಿಕೆಯನ್ನು ಗಂಧ ದಂತೆ ನುಣ್ಣಗೆ ತೇಯ್ದುಕೊಳ್ಳಿ, ಒಂದು ಚಮಚದಷ್ಟನ್ನು ಹಾಲಲ್ಲಿ ಅಥವಾ ನೀರಿನಲ್ಲಿ ಬರೀ ಹೊಟ್ಟೆಯಲ್ಲಿ ಮಗು ವಿಗೆ ಕುಡಿಸಿ, ಮಗುವಿನ ಹೊಟ್ಟೆ ಯಲ್ಲಿ ಇರಬಹುದಾದ ಜಂತು ಹುಳವೆಲ್ಲಾ (ಮಲದ ಮೂಲಕ) ಹೊರಗೆ ಬಂದು ಬಿಡುತ್ತದೆ. ಇದಕ್ಕೆ ಪಥ್ಯವೇನಿಲ್ಲ. ವಯಸ್ಸಿಗೆ ತಕ್ಕಂತೆ ಕೊಂಚ ಹೆಚ್ಚು, ಕಡಿಮೆ ಮಾಡಬಹುದು. (ಸಂಗ್ರಹ)