ಗೋಣಿಕೊಪ್ಪ ವರದಿ, ಜ. 5 : ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ತಟ್ಟಳ್ಳಿ ಗಿರಿಜನ ಹಾಡಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಿರಿಜನೋತ್ಸವವದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
ನಾಗರಹೊಳೆ ಗದ್ದೆ ಹಾಡಿಯ ರಮೇಶ್ ತಂಡ, ಚೊಟ್ಟೆಪಾರೆ ಹಾಡಿಯ ಜೆ.ಕೆ. ರಾಮು, ಮಾಲ್ದಾರೆ ಭಾಗದ ರಾಜು, ಗೋಣಿಗದ್ದೆ ಭಾಗದ ತಿಮ್ಮ ತಂಡಗಳ ಕಲಾವಿದರುಗಳು ತಮ್ಮ ತಮ್ಮ ಸಂಸ್ಕøತಿಗೆ ಸಂಬಂಧಿಸಿದ ಕಥನ ಗೀತೆಗಳ ಮೂಲಕ ಗಿರಿಜನರ ಮತ್ತು ಕಾಡಿನ ನಡುವಿನ ಅವಿನಾಭಾವ ಸಂಬಂಧವನ್ನು ಕಲೆಯ ಮೂಲಕ ಬಿಚ್ಚಿಟ್ಟರು. ನಂಗ ಇರೋದು ಹುಲ್ಲಿನ ಮನೆ ಎಂಬ ಹಾಡಿಗೆ ನಾಣಚ್ಚಿ ರಮೇಶ್ ಮತ್ತು ತಂಡವದರು ಹಾಡಿ ಕುಣಿದು ಕುಪ್ಪಳಿಸಿದ ನೃತ್ಯಗೀತೆ ಮನ ಸೂರೆಗೊಂಡಿತು.
ಜೆ. ಕೆ. ರಾಮು ಅವರ ಜೇನುಕೊಯ್ಯುವ ಹಾಡು, ಕಾಡಿನ ಗೀಜುಗ ಪಕ್ಷಿಯೊಂದಿಗಿನ ಒಡನಾಟದ ಬಾರೆ ಗೀಜುಗನ ಹಾಡು ಮತ್ತು ನೃತ್ಯ ಗಮನ ಸೆಳೆಯಿತು. ಚಿಕ್ಕರೇಷ್ಮೆ ಹಾಡಿಯ ತಮ್ಮಯ್ಯ ಮತ್ತು ತಂಡದವರ ರೋಗ ರುಜಿನಗಳಿಗೆ ಪರಿಹಾರ ನೀಡುವ ಯರವರ ದೇವರು ರೂಪಕ ಯರವ ಜನಾಂಗದ ಸಂಸ್ಕøತಿ ಅನಾವರಣಗೊಳಿಸಿತು. ಜೇನುಕುರುಬರ ಬುರುಡೆ ಮಹತ್ವವನ್ನು ದೆವ್ವ ಬಂದವರಂತೆ ನಟಿಸಿದ ಚೆನ್ನಂಗಿಯ ರಾಜು ತಂಡದವರ ಅಭಿನಯ ಮನಸೆಳೆಯಿತು. ಕಲಾವಿದರು ಹೆಚ್ಚಿನದಾಗಿ ಪ್ಲಾಸ್ಟಿಕ್ ಡ್ರಂ ಹಾಗೂ ಬಿಂದಿಗೆಗಳನ್ನು ವಾದ್ಯ ಪರಿಕಗಳಾಗಿ ಬಳಸಿದ್ದರು.
ತೋರ ಗ್ರಾಮದ ಗೋಪಮ್ಮ ತಂಡದ ಕುಡಿಯರ ಉರುಟಿಕೊಟ್ಟ್ ಪಾಟ್ ನೃತ್ಯ, ಸನ್ಯಾಸಿಪುರದ ಡೊಳ್ಳುಕುಣಿತ, ಕಂಸಾಳೆ ನೃತ್ಯಗಳು ರಂಜಿಸಿದವು. ಬಾಳೆಲೆ ವಿಜಯಲಕ್ಷ್ಮಿ ಪಿಯು ಕಾಲೇಜು ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಮಾತನಾಡಿ, ಅರಣ್ಯದ ನಡುವೆ ಹುಟ್ಟಿದ ಗಿರಿಜನ ಸಂಸ್ಕøತಿಯಲ್ಲಿರುವ ಮಾನವ ಪ್ರೀತಿ ಮತ್ತು ಪರಿಸರ ಪ್ರೇಮ ಅನುಕರಣೀಯ ಎಂದರು.
ಗಿರಿಜನ ಮೂಲ ಸೌಕರ್ಯ ಹೋರಾಟ ಸಮಿತಿ ಸಂಚಾಲಕಿ ಇಂದಿರಾ ಮಾತನಾಡಿ, ಪ್ರಭಾವಕ್ಕೆ ಒಳಗಾಗಿ ನಮ್ಮ ಸಂಸ್ಕøತಿಯನ್ನು ಕಳೆದುಕೊಳ್ಳಬಾರದು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಕಾರ್ಯಕ್ರಮ ಉದ್ಘಾಟಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಣಿ, ಉಪಾಧ್ಯಕ್ಷ ರಘು, ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ದರ್ಶನಾ ಇದ್ದರು.