ನಮ್ಮ ಬ್ಯಾಂಕಿನ ಬ್ಯಾಟರಾಯನಪುರದ ಶಾಖೆಯಲ್ಲಿ ನಾನು ಆಗ ಡಿಮ್ಯಾಂಡ್ ಡ್ರಾಫ್ಟ್ ವಿಭಾಗದಲ್ಲಿ ಇದ್ದೆ. ಒಂದು ದಿನ ಮಧ್ಯಾಹ್ನ ಹನ್ನೆರಡು ಗಂಟೆಯ ಹೂತ್ತಿನಲ್ಲಿ ಸುಮಾರು ಇಪ್ಪತ್ತು ವರ್ಷದ ತರುಣ ನನ್ನ ಕೌಂಟರ್ ಎದುರು ನಿಂತು ಕೇಳಿದ, ‘ಹೊರದೇಶಕ್ಕೆ ಅರವತ್ತೆರಡು ಸಾವಿರ ರೂಪಾಯಿ ಕಳಿಸಬೇಕು.. ಹೇಗೆ ಕಳಿಸಬೇಕು..?’

‘ಮೊದಲು ನಿಮ್ಮ ಖಾತೆಗೆ ಹಣ ಜಮಾ ಮಾಡಬೇಕು.. ಆ ನಂತರ ನಿಮ್ಮ ಖಾತೆಯಿಂದ ತೆಗೆದು ನಾವು ನಮ್ಮ ¥sóÁರೀನ್ ಡಿಪಾಟ್ರ್ಮೆಂಟಿನ ಮೇಲೆ ಡಿಡಿ ಕೊಡುತ್ತೇವೆ... ಯಾರಿಗೆ ಕಳಿಸಬೇಕು ಇತ್ಯಾದಿ ವಿವರ ಬರೆದುಕೊಡಲು ನಾವು ನಿಮಗೊಂದು ಫಾರಮ್ ಕೊಡುತ್ತೇವೆ. ನಮ್ಮ ಫಾರೀನ್ ಡಿಪಾಟ್ರ್ಮೆಂಟಿನವರು ಆ ದೇಶಕ್ಕೆ ಹಣ ಕಳಿಸುವ ವ್ಯವಸ್ಥೆ ಮಾಡುತ್ತಾರೆ...’ ನಾನು ವಿವರಿಸಿದೆ.

‘ಆದರೆ ನಂದು ಖಾತೆಯೇ ಇಲ್ಲ...’ ಎಂದ ಹುಡುಗ.

‘ಐವತ್ತು ಸಾವಿರಕ್ಕಿಂತ ಹೆಚ್ಚಿನ ಹಣದ ಡಿಡಿ ತೆಗೆಯುವಾಗ ಅದು ಖಾತೆಯ ಮೂಲಕವೆ ಆಗಬೇಕು... ಅದು ರಿಸರ್ವ್ ಬ್ಯಾಂಕ್ ನಿಯಮ.. ನಿಮ್ಮ ಖಾತೆ ಯಾವ ಬ್ಯಾಂಕಿನಲ್ಲಿದ್ದರೂ ಸರಿಯೆ... ಎಲ್ಲ ಬ್ಯಾಂಕಿನವರೂ ವಿದೇಶಕ್ಕೆ ಹಣ ಕಳಿಸುವ ವ್ಯವಸ್ಥೆ ಹೊಂದಿರುತ್ತಾರೆ..’ ನಾನು ಹೇಳಿದೆ.

‘ನಂದು ಎಲ್ಲೂ ಖಾತೆಯೇ ಇಲ್ಲ...’ ಎಂದ ಹುಡುಗ.

‘ಹಾಗಾದರೆ ಡಿಡಿ ತೆಗೆಯಲು ಆಗುವದಿಲ್ಲ...’ ಎಂದೆ.

‘ಅರ್ಜೆಂಟಾಗಿ ಹೊರದೇಶಕ್ಕೆ ಹಣ ಕಳಿಸಬೇಕು.. ಈ ಬ್ಯಾಂಕಿನವರದ್ದು ಸಾವಿರದೆÉಂಟು ರೂಲ್ಸು...’ ಗೊಣಗುತ್ತ ಹೊರಟ ಹುಡುಗ. ನಾನು ಮಾತಾಡಲಿಲ್ಲ.

ಒಂದು ಗಂಟೆ ಬಿಟ್ಟು ಅದೇ ಹುಡುಗ ಇನ್ನೊಬ್ಬರ ಒಟ್ಟಿಗೆ ಬಂದು ಹೇಳಿದ, ‘ಇವರದು ನಿಮ್ಮಲ್ಲಿ ಖಾತೆ ಇದೆ... ಅದರಿಂದ ಡಿಡಿ ತಗೋತೇವೆ...’

‘ಸರಿ... ಚಲನ್ ಬರೆದು ಖಾತೆಗೆ ಹಣ ಹಾಕಿ...’ ಎಂದೆ.

ಅವರು ಖಾತೆಗೆ ಹಣ ಜಮಾ ಮಾಡಿ ಕೌಂಟರ್ ಫಾಯಿಲ್ ತೋರಿಸಿದರು.

ಡಿಡಿ ಚಲನ್ ನಾನೇ ಭರ್ತಿ ಮಾಡಿ, ಹೊರದೇಶಕ್ಕೆ ಕಳಿಸಲು ವಿವರ ಬರೆಯುವ ಫಾರಂ ಕೊಟ್ಟೆ. ಆತ ಅದನ್ನು ಭರ್ತಿ ಮಾಡಿ ತಂದು ಹೇಳಿದ, ‘ಒಂದು ಕಾಲಮ್ ಭರ್ತಿ ಮಾಡಲು ತಿಳಿಯುತ್ತಿಲ್ಲ... ‘

‘ಉದಾಹರಣೆಗೆ.. ನಿಮ್ಮ ಮನೆಯವರ್ಯಾರದರೂ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅದಕ್ಕಾಗಿ ಎಂದು ಬರೆಯಿರಿ...’ ಎಂದೆ.

‘ಆದರೆ ಅದಕ್ಕಾಗಿ ಅಲ್ಲ... ನನ್ನ ಮೊಬೈಲಿಗೆ ನಾಲ್ಕು ಲಕ್ಷ ಪೌಂಡ್ ಬಹುಮಾನ ಬಂದಿದೆ... ಅಲ್ಲಿನ ನಿಯಮದ ಪ್ರಕಾರ ಅವರು ನನಗೆ ಹಣ ಕಳಿಸುವದಕ್ಕೆ ಖರ್ಚಿಗಾಗಿ ಈ ಹಣ ಕಳಿಸಬೇಕು....’ ಎಂದ ಹುಡುಗ.

‘ಎಲ್ಲಿ... ತೋರಿಸಿ ಆ ಸಂದೇಶ....?’ ಕೇಳಿದೆ ನಾನು.

ಆ ಸಮಯದಲ್ಲಿ ನನ್ನ ಹತ್ತಿರ ಮೊಬೈಲ್ ಇರಲಿಲ್ಲ. ಆದರೆ ಬಹುಮಾನಗಳ ಮತ್ತು ನಡೆಯುವ ಮೋಸದ ಬಗ್ಗೆ ಎಚ್ಚರಿಕೆಯಿಂದಿರಬೇಕೆಂಬ ಲೇಖನ ಗಳನ್ನು ಪತ್ರಿಕೆಗಳಲ್ಲಿ ಓದಿದ್ದೆ.

ನಾನು ಹೇಳಿದೆ,’ ಬೇಡಣ್ಣ... ಇದರಲ್ಲಿ ಏನೊ ಮೋಸ ಇದೆ ನಾಲ್ಕು ಲಕ್ಷ ಪೌಂಡ್ ಬಹುಮಾನ ಯಾರದ್ರೂ ಯಾಕೆ ಕೊಡ್ತಾರೆ... ಈ ತರಹದ ಬಹುಮಾನ ಆಮಿಷಕ್ಕೆ ಬಲಿಯಾಗಬೇಡಿ ಅಂತ ಪತ್ರಿಕೆಗಳಲ್ಲಿ ಬರ್ತಾ ಇರುತ್ತೆ...’

ಆ ಹುಡುಗ ಕೋಪದಿಂದ ಹೇಳಿದ,’ ನನಗೆ ಇಷ್ಟೊಂದು ಹಣ ಬರ್ತಾ ಇರೋದು ಕಂಡು ನಿಮಗೆ ಹೊಟ್ಟೆ ಉರಿ, ನಿಮಗೆ ಮೊಬೈಲಲ್ಲಿ ಬಹುಮಾನ ಬಂದಿದ್ಯಾ...?’

‘ಇಲ್ಲಪ್ಪ... ನನ್ನ ಹತ್ತಿರ ಮೊಬೈಲ್ ಇಲ್ಲ...’ ನಾನು ಪೆಚ್ಚಗಾಗಿ ಹೇಳಿದೆ. ಡಿಡಿ ತಯಾರಿ ಮಾಡಿ, ಅಧಿಕಾರಿಯ ಸಹಿ ಹಾಕಿಸಿ, ಪಾರಮ್ಮನ್ನು ಡಿಡಿಗೆ ಪಿನ್ ಮಾಡಿ, ನಮ್ಮ ಫಾರೀನ್ ಡಿಪಾಟ್ರ್ಮೆಂಟಿನ ವಿಳಾಸ ಕೊಟ್ಟು ಕಳಿಸಿದೆ.

ಸುಮಾರು ಹದಿನೈದು ದಿನಗಳ ನಂತರ ಅದೇ ಖಾತೆದಾರನೊಂದಿಗೆ ಆ ಹುಡುಗ ಮತ್ತೆ ಪ್ರತ್ಯಕ್ಷನಾದ. ಆತ ಹೇಳಿದ,’ ಕೊನೆಯದಾಗಿ, ಈಗ ಒಂದು ಲಕ್ಷದ ನಲವತ್ತು ಸಾವಿರದ ಡಿಡಿ ತಗೋಬೇಕು ಅವರು ತೆರಿಗೆ ಕಟ್ಟಬೇಕಂತೆ, ಇನ್ನು ಒಂದು ತಿಂಗಳಲ್ಲಿ ಹಣ ಬರುತ್ತೆ ಅದೂ ಕೋಟಿಯಲ್ಲಿ’

‘ಸರಿ...’ ಅಂದೆ.

ಅದೇ ದಿನ ಖಾತೆಯನ್ನು ತೆರೆದು, ಡಿಡಿಯನ್ನೂ ತೆಗೆದುಕೊಂಡು ಹೋದ.

ಒಂದು ತಿಂಗಳ ನಂತರ ದಿನಾಲೂ ಆ ಕೋಟಿವೀರನನ್ನು ಉಳಿತಾಯ ಖಾತೆಯ ಕೌಂಟರಿನಲ್ಲಿ ಗಮನಿಸುತ್ತಿದ್ದೆ.

ಒಮ್ಮೆ ಯಾವುದೊ ಕೆಲಸದ ನಿಮಿತ್ತ ನಮ್ಮ ಫಾರೀನ್ ಡಿಪಾಟ್ರ್ಮೆಂಟಿಗೆ ಹೋಗಿದ್ದೆ. ಅಲ್ಲಿನ ಅಧಿಕಾರಿಯ ಬಳಿ ಆ ಹುಡುಗನ ವಿಷಯ ಪ್ರಸ್ತಾಪಿಸಿದೆ. ಅವರು ಹೇಳಿದರು, ‘ ನಾವೂ ಆತನಿಗೆ ತಿಳಿಹೇಳಿದೆವು. ಆತ ಬಲು ಹುಂಬ, ನಮಗೇ ಹೊಟ್ಟೆ ಉರಿ ಅಂದ ಹಾಳಾಗೋಗ್ಲಿ ಅಂತ ನಮ್ಮ ಕೆಲಸ ನಾವು ಮಾಡಿದೆವು... ಎರಡು ಲಕ್ಷ ಪಂಗನಾಮ ಹಾಕಿಸಿಕೊಂಡ....’

ಆ ತರುಣ ಸುಮಾರು ಆರು ತಿಂಗಳ ವರೆಗೆ ಶಾಖೆಗೆ ಬರುತ್ತಿದ್ದ. ಆ ಮೇಲೆ ಬರುವದನ್ನು ನಿಲ್ಲಿಸಿದ. 2003ರಲ್ಲಿ ಎರಡು ಲಕ್ಷ ಎಂದರೆ ಬಹಳ ದೊಡ್ಡ ಮೊತ್ತವಾಗಿತ್ತು. ಆ ಹುಡುಗ ನೇಣು ಹಾಕಿಕೊಂಡಿರದಿದ್ದರೆ ಸಾಕು ಎಂದುಕೊಂಡೆ.

ಒಂದು ದಿನ ಆ ಹುಡುಗನ ಜೊತೆ ಬಂದವರು ಕಂಡರು. ನಾನು ಕೇಳಿದೆ, ‘ಕೋಟಿಯಲ್ಲಿ ಹಣ ಬಂತಾ...?’

‘ನಿಮ್ಮ ಮಾತನ್ನು ಆ ದಿನ ಕೇಳಿದ್ದರೆ ಚೆನ್ನಾಗಿಯೇ ಇರುತ್ತಿತ್ತು... ಒಂದು ತಿಂಗಳಲ್ಲಿ ಡಬಲ್ ಕೊಡುತ್ತೇನೆಂದು ಆ ಹುಡುಗ ನನ್ನಿಂದ ಮೂವತ್ತು ಸಾವಿರ ಪೀಕಿದ್ದ... ನಂಗೂ ಆಸೆ ನನ್ನ ಹಣ ಹೋಯಿತು. ಹುಡುಗ ಮೆಂಟಲ್ ಆಗೋಗಿದಾನೆ....’ ಆತನ ಕಣ್ಣಲ್ಲಿ ನೀರಿತ್ತು. ? ನರಸಿಂಹ ಹೆಗಡೆ

(ನಿವೃತ್ತ ಬ್ಯಾಂಕ್ ಉದ್ಯೋಗಿ)

ಬೆಂಗಳೂರು. ಮೊ : 9449060077