ಶನಿವಾರಸಂತೆ, ಜ. 4: ಸಮೀಪದ ಒಡೆಯನಪುರ ಗ್ರಾಮದ ಸೀಂಕ್ರ ಮೊಗೇರ-ವಸಂತಿ ದಂಪತಿಯ ಪುತ್ರ, ಪತ್ರಕರ್ತ ವಿ.ಸಿ. ಸುರೇಶ್ (42) ಅವರು ತಾ. 4 ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ತಂದೆ-ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ವಿ.ಸಿ. ಸುರೇಶ್ ಅವರ ನಿಧನಕ್ಕೆ ಗೋಣಿಕೊಪ್ಪ ಪ್ರೆಸ್ ಕ್ಲಬ್ ವತಿಯಿಂದ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಶನಿವಾರಸಂತೆ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಭೆ ನಡೆಯಿತು. ಮೊಗೇರ ಸಮಾಜ ಅಧ್ಯಕ್ಷ ಬಿ. ಶಿವಪ್ಪ, ಗೌರವಾಧ್ಯಕ್ಷ ಪಿ.ಎಂ. ರವಿ ಸಂತಾಪ ಸೂಚಿಸಿದ್ದಾರೆ.