ಗೋಣಿಕೊಪ್ಪ ವರದಿ, ಜ. 4: ಚೆನ್ನೈ ಸ್ಪೋಟ್ರ್ಸ್ ಯೂನಿವರ್ಸಿಟಿ, ಇಂಡಿಯನ್ ವಿಶ್ವವಿದ್ಯಾಲಯ ಒಕ್ಕೂಟ ವತಿಯಿಂದ ಚೆನ್ನೈ ಸ್ಪೋಟ್ರ್ಸ್ ಎಜುಕೇಷನಲ್ ಮೈದಾನದಲ್ಲಿ ಆರಂಭಗೊಂಡಿರುವ ಅಖಿಲ ಭಾರತ ವಿಶ್ವವಿದ್ಯಾಲಯ ಅಂತರ್ ಮಹಿಳಾ ಹಾಕಿ ಟೂರ್ನಿಯಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ತಂಡವು ಪೂರ್ವಾಂಚಲ ವಿವಿ ವಿರುದ್ದ ಗೆಲುವು ದಾಖಲಿಸಿ ಮುನ್ನಡೆ ಕಾಯ್ದುಕೊಂಡಿದೆ.

ಶನಿವಾರ ನಡೆದ ಲೀಗ್ ಪಂದ್ಯದಲ್ಲಿ 1-0 ಗೋಲುಗಳ ಮೂಲಕ ಗೆದ್ದು ಬೀಗಿತು. ಮಂಗಳೂರು ಪರ ಪವಿತ್ರ ಏಕೈಕ ಗೋಲು ಹೊಡೆದು ಗೆಲುವಿಗೆ ಪ್ರಮುಖ ಕಾರಣರಾದರು.