ಸೋಮವಾರಪೇಟೆ, ಜ. 3: ಜೀವನದಲ್ಲಿ ಜಿಗುಪ್ಸೆ ಹೊಂದಿ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ತಲ್ತರೆಶೆಟ್ಟಳ್ಳಿ ನಿವಾಸಿ ಯಶೋಧ ಎಂಬವರ ಪತಿ, ಕೃಷ್ಣಪ್ಪ (55) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದು, ತಾ. 1ರಂದು ಸಂಜೆ ವೇಳೆಗೆ ಮನೆಯ ಹಿಂಭಾಗದಲ್ಲಿರುವ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ತಮ್ಮ ಮನೆಯಲ್ಲಿಯೇ ದೇವಾಲಯ ನಿರ್ಮಿಸಿಕೊಂಡು ಪೂಜೆ ಸಲ್ಲಿಸುತ್ತಿದ್ದ ಕೃಷ್ಣಪ್ಪ ಅವರಲ್ಲಿಗೆ ಅನೇಕ ಮಂದಿ ತೆರಳುತ್ತಿದ್ದರು. ಮೊನ್ನೆ ಮಧ್ಯಾಹ್ನ ನಂತರ ಕಾಣೆಯಾಗಿದ್ದ ಅವರನ್ನು ಮನೆಯವರು ಹುಡುಕುತ್ತಿದ್ದರು. ಸಂಜೆ ವೇಳೆಗೆ ಮನೆಯ ಹಿಂಭಾಗವಿರುವ ಕಾಡಿನಲ್ಲಿ, ಮರಕ್ಕೆ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ.
ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತರು ಪತ್ನಿ ಸೇರಿದಂತೆ ಈರ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.