ಗೋಣಿಕೊಪ್ಪಲು, ಜ. 2: ಎನ್.ಆರ್.ಸಿ. ಜಾರಿಗೆ ತಂದು ಮುಸ್ಲಿಂರನ್ನು ದೇಶದಿಂದ ಹೊರ ಹಾಕಲಾಗುತ್ತದೆ ಎಂಬ ಅಪಪ್ರಚಾರಗಳು ಕೇವಲ ವಿರೋಧ ಪಕ್ಷಗಳ ಓಟ್ ಬ್ಯಾಂಕ್ ರಾಜ ಕಾರಣವಷ್ಟೇ. ಇಂತಹ ವದಂತಿಗಳಿಗೆ ಮಾರು ಹೋಗಬೇಡಿ ಎಂದು ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು. ವೀರಾಜಪೇಟೆ ಬಿಜೆಪಿ ಮಂಡಳ ವತಿಯಿಂದ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ತಾಲೂಕು ಮಟ್ಟದ ಜನಜಾಗೃತಿ ಅಭಿಯಾನ ಸಭೆಯಲ್ಲಿ ಮಾತನಾಡಿದರು. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಯಾವುದೇ ಗೊಂದಲ ಬೇಡ. ಅಪಪ್ರಚಾರಗಳಿಗೆ ಕಿವಿಕೊಡದೆ ಪೌರತ್ವ ತಿದ್ದುಪಡಿ ವಿಧೇಯಕವನ್ನು ಅರಿತುಕೊಳ್ಳಿ. ಪೌರತ್ವ ಕಾಯ್ದೆ ಮುಸ್ಲಿಂ ವಿರೋಧಿ ಅಲ್ಲ. ಈ ಬಗ್ಗೆ ಮಾಹಿತಿ ಇಲ್ಲದೇ ಅಪಪ್ರಚಾರ ಮಾಡುತ್ತಾ, ಕಾಯ್ದೆ ವಿರುದ್ಧ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ. ವಿರೋಧಿಸುವವರನ್ನು ದೇಶ ದ್ರೋಹಿಗಳು ಎಂದು ಪರಿಗಣಿಸ ಲಾಗುತ್ತದೆ ಎಂದು ಪೌರತ್ವ ಕಾಯ್ದೆ ವಿರೋಧಿಸುವವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
14ನೇ ವಿಧಿಯನ್ವಯ ಈ ಕಾಯ್ದೆ ಪ್ರಜೆಗಳ ಸಮಾನತೆಯ ಹಕ್ಕನ್ನು ಕಸಿದು ಕೊಳ್ಳುವುದಿಲ್ಲ. ಧಾರ್ಮಿಕ ಸ್ವಾತಂತ್ರ್ಯಕ್ಕೆ ದಕ್ಕೆಯಾಗುವುದಿಲ್ಲ ಎಂದು ಮಾಹಿತಿ ನೀಡಿದ ಅವರು;
(ಮೊದಲ ಪುಟದಿಂದ) ಪೌರತ್ವ ತಿದ್ದುಪಡಿ ವಿಧೇಯಕ ಮಂಡನೆಯು 140ಕ್ಕೂ ಹೆಚ್ಚು ಎನ್.ಜಿ.ಓಗಳು ರಾಜಕೀಯ ಪಕ್ಷಗಳು ಮತ್ತು ಹಲವು ರಾಜ್ಯದ ಮುಖ್ಯಮಂತ್ರಿಗಳ ಪ್ರಮುಖ ಸಭೆಗಳಲ್ಲಿ 119 ಗಂಟೆಗಳ ಸುದೀರ್ಘ ಚರ್ಚೆ ಮತ್ತು ಸಲಹೆಗಳ ನಂತರ ವಿಧೇಯಕವನ್ನು ಪರಿಗಣಿಸಲಾಗಿದೆ ಎಂದು ಹೇಳಿದರು.
ಬಾಂಗ್ಲ, ಪಾಕಿಸ್ತಾನ, ಅಪ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರು ಶೋಷಣೆಗೊಳಗಾಗಿ ಭಾರತಕ್ಕೆ ನಿರಾಶ್ರಿತರಾಗಿ ಬಂದಂತಹ 6 ಧರ್ಮಗಳಿಗೆ ಈ ಪೌರತ್ವ ಕಾಯ್ದೆ ಯಡಿ ಭದ್ರತೆಯನ್ನು ಒದಗಿಸುವುದೇ ಮುಖ್ಯ ಕಾರಣವಾಗಿದೆ. ಈ ಮೂರು ದೇಶಗಳಲ್ಲಿ ಮುಸ್ಲಿಂರು ಬಹುಸಂಖ್ಯಾತ ರಾಗಿರುವುದರಿಂದ ಇವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿಲ್ಲ. ಭಾರತದಲ್ಲಿರುವ ಯಾವುದೇ ಮುಸ್ಲಿಂರನ್ನು ಹೊರಗಟ್ಟುವ ಸಂಚು ಇದರ ಹಿಂದೆ ಇಲ್ಲ. ಕಾಯ್ದೆಯ ಪೂರ್ಣ ಮಾಹಿತಿಯನ್ನು ತಿಳಿದು ಕೊಳ್ಳುವುದು ಬಹುಮುಖ್ಯ ಎಂದರು.
ಭಾರತಕ್ಕೆ ಬರುವ ಅಕ್ರಮ ನುಸುಳುಕೋರರನ್ನು ತಡೆಗಟ್ಟುವ ಮತ್ತು ತನ್ನ ಗಡಿಯನ್ನು ರಕ್ಷಿಸುವುದು ನುಸುಳುಕೋರರ ವ್ಯತ್ಯಾಸವನ್ನು ಗುರುತಿಸುವ ವ್ಯವಸ್ಥೆಗಾಗಿ ಪೌರತ್ವ ಕಾಯ್ದೆ ತಿದ್ದುಪಡಿ ಅಗತ್ಯವಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಪಾಡಬೇಕು ಎಂದು ಪ್ರತಿಪಾದಿಸ ಲಾಗಿತ್ತು. ಆದರೆ ಅಲ್ಪಸಂಖ್ಯಾತರ ಹಿತವನ್ನು ರಕ್ಷಿಸುವÀಲ್ಲಿ ಬಾಂಗ್ಲ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ದೇಶಗಳು ಇಚ್ಚಾಶಕ್ತಿಯನ್ನು ತೊರಲಿಲ್ಲ. ಆದರೆ ಭಾರತದಲ್ಲಿನ ಅಲ್ಪಸಂಖ್ಯಾತರ ಶೋಷಣೆಯನ್ನು ಕಡೆಗಣಿಸಿಲ್ಲ ಎಂಬ ಹೆಮ್ಮೆ ಇದೆ ಎಂದು ಸಭೆಯ ಮುಂದಿಟ್ಟರು.
1992ರಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಭಾಂಗ್ಲ ದೇಶಗಳಲ್ಲಿ ಹಿಂದು ಮತ್ತು ಸಿಖ್ಖರ 2 ಲಕ್ಷ ಧಾರ್ಮಿಕ ಕ್ಷೇತ್ರಗಳಿದ್ದವು. 2018ರಲ್ಲಿ ಕೇವಲ 500 ಧಾರ್ಮಿಕ ಕ್ಷೇತ್ರಗಳು ಉಳಿದುಕೊಂಡಿದೆ. ಈ ರೀತಿಯ ಶೋಷಣೆಗೆ ಒಳಗಾಗಿ ಭಾರತಕ್ಕೆ ನುಸುಳುಕೋರರಾಗಿ ಬಂದಂತಹ 6 ಧರ್ಮದವರನ್ನು ಪೌರತ್ವ ಕಾಯ್ದೆಯಡಿ ಭಾರತದ ಪ್ರಜೆಯಾಗಿ ಮಾಡಲು ಕಾನೂನು ರೂಪಿಸಲಾಗಿದೆ. ಆದರೆ ವಿಧೇಯಕದ ವಿರುದ್ಧ ಅಪಪ್ರಚಾರ ಮಾಡುವ ವಿರೋಧ ಪಕ್ಷಗಳು ದೇಶದ ಜನತೆಯ ದಿಕ್ಕನ್ನು ತಪ್ಪಿಸುವ ಪ್ರಯತ್ನ ನಡೆಸುತ್ತಿದೆ. ಕಾಯ್ದೆಯ ಮಾಹಿತಿಯನ್ನು ಪ್ರತಿ ಮನೆಗೂ ಮುಟ್ಟಿಸುವ ಕಾರ್ಯ ನಡೆಸಿ ಜನಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಭಾರತೀಶ್ ಮಾತನಾಡಿ 3 ಕೋಟಿ ಮನಸ್ಸುಗಳಿಗೆ, ಮನೆಗಳಿಗೆ ಪೌರತ್ವ ಕಾಯ್ದೆಯ ಮಾಹಿತಿಯನ್ನು ಮುಟ್ಟಿಸುವ ಕಾರ್ಯ ನಡೆಯಬೇಕಾಗಿದೆ. ಮನೆಯ ಒಬ್ಬ ಮಹಿಳಾ ಸದಸ್ಯೆಗೆ ಮಾಹಿತಿಯನ್ನು ಮನವರಿಕೆ ಮಾಡಿದರೆ ಹೆಚ್ಚಿನ ಪ್ರಚಾರ ದೊರೆಯುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪೌರತ್ವ ಕಾಯ್ದೆಯ ಮಾಹಿತಿಯನ್ನು ಹಂಚಿಕೊಳ್ಳು ವುದರಿಂದ ಪ್ರತಿಯೊಬ್ಬರಿಗೂ ಕಾಯ್ದೆಯ ಬಗ್ಗೆ ಮನವರಿಕೆ ಯಾಗುತ್ತದೆ. ಕಾಯ್ದೆಯ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್, ಎಸ್.ಡಿ.ಪಿ ಮತ್ತು ಜೆಡಿಎಸ್ ಪಕ್ಷಗಳು ಜನತೆಯ ಹಾದಿತಪ್ಪಿಸಲು ಪ್ರಯತ್ನಿ ಸುತ್ತಾ ದೇಶದ ಶಾಂತಿ ಕದಡಲು ಮುಂದಾಗಿದೆ. ಇಂತಹ ಷಡ್ಯಂತ್ರದ ವಿರುದ್ಧ ಪ್ರತಿಭಟಿಸಬೇಕು ಎಂದು ಹೇಳಿದರು. ಇದೇ 17ರಂದು ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಜನಜಾಗೃತಿ ಸಭೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ; ಕಾಯ್ದೆಯನ್ನು ವಿರೋಧಿಸುವವರು ದೇಶದ್ರೋಹಿಗಳು. ಜನರ ನಿರೀಕ್ಷೆಗೆ ತಕ್ಕ ಆಡಳಿತ ಮೋದಿ ಸರ್ಕಾರ ಮಾಡುತ್ತಿದೆ. ಭರವಸೆ ನೀಡಿದಂತೆ ಜನರಿಗೆ ನ್ಯಾಯಯುತವಾದ ಆಡಳಿತವನ್ನು ಬಿಜೆಪಿ ನಡೆಸುತ್ತಿದೆ. ಇಂತಹ ಉತ್ತಮ ವ್ಯವಸ್ಥೆಯ ಸರ್ಕಾರವನ್ನು ವಿರೋಧಿಸುತ್ತಾ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲು ವಿರೋಧ ಪಕ್ಷಗಳು ಪಣ ತೊಟ್ಟಿವೆÉ. ವಿರೋಧ ಪಕ್ಷಗಳಿಗೆ ದೇಶದ ಅಭಿವೃದ್ಧಿಗಿಂತ ಪಕ್ಷದ ಹಿತವೇ ಮುಖ್ಯ ಎಂದು ಹೇಳಿದರು.
ರಾಜ್ಯ ಬಿಜೆಪಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ವೀರಾಜಪೇಟೆ ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್, ಪ್ರಧಾನ ಕಾರ್ಯದರ್ಶಿಗಳಾದ ಸುವಿನ್ ಗಣಪತಿ, ಲಾಲ ಭೀಮಯ್ಯ, ನಿಕಟಪೂರ್ವ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ತಾಲೂಕು ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ಯುವ ಮೋರ್ಚಾ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ, ಉಪಾಧ್ಯಕ್ಷೆ ರಾಣಿ ನಾರಾಯಣ, ತಾ.ಪಂ. ಅಧ್ಯಕ್ಷರು, ಸದಸ್ಯರು, ಜಿ.ಪಂ. ಸದಸ್ಯರು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು. ಕಾರ್ಯಕ್ರಮ ಪ್ರಾರಂಭ ದಲ್ಲಿ ನಿಧನರಾದ ಪೇಜಾವರ ಸ್ವಾಮೀಜಿಯ ಆತ್ಮಕ್ಕೆ ಸಂತಾಪ ಸೂಚಿಸಲಾಯಿತು.
-ಎನ್.ಎನ್. ದಿನೇಶ್