ಮಡಿಕೇರಿ, ಡಿ.31: ಘನ ಉಚ್ಚ ನ್ಯಾಯಾಲಯದ ಕ್ರಿಮಿನಲ್ ಪಿಟಿಷನ್ ಸಂಖ್ಯೆ 1850/2017ರಲ್ಲಿ ಖಾಸಗಿ ಸಂಘಟನೆ, ಸಂಘ ಸಂಸ್ಥೆ, ಕಂಪೆನಿ, ವ್ಯಕ್ತಿಗಳು, ರಾಜ್ಯ, ಕೇಂದ್ರ ಸರ್ಕಾರಗಳ ಸಂಸ್ಥೆಗಳ ಹಾಗೂ ಅರೆ ನ್ಯಾಯಿಕ ಸಂಸ್ಥೆಗಳಾದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹೋಲುವಂತಹ ಲಾಂಛನ ಹಾಗೂ ಹೆಸರು ಬಳಸಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿರುವುದನ್ನು ಆಕ್ಷೇಪಿಸಿ, ಮಾನ್ಯ ಉಚ್ಚ ನ್ಯಾಯಾಲಯವು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿರುತ್ತದೆ. ಲಾಂಛನ ಹಾಗೂ ಹೆಸರುಗಳನ್ನು ಬಳಸಿಕೊಂಡು ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕೇಂದ್ರ ಮೋಟಾರ್ ವಾಹನ ಕಾಯ್ದೆ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧೀಕ್ಷಕಿ ಡಾ.ಸುಮನ್ ಡಿ.ಪಿ. ಅವರು ತಿಳಿಸಿದ್ದಾರೆ. ಮುಂದಿನ 7 ದಿನಗಳ ಒಳಗಾಗಿ ಫಲಕಗಳನ್ನು ತೆರವುಗೊಳಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವದಾಗಿ ಎಚ್ಚರಿಸಿದ್ದಾರೆ.