ವೀರಾಜಪೇಟೆ, ಡಿ. 31: ಕರ್ನಾಟಕ ಸ್ಪೋಟ್ರ್ಸ್ ಡ್ಯಾನ್ಸ್ ಅಸೋಸಿಯೇಶನ್ ವತಿಯಿಂದ ಡಿ. 29 ರಂದು ಪಿರಿಯಾಪಟ್ಟಣದ ಸಾಯಿ ಸಮುದಾಯ ಭವನದಲ್ಲಿ ನಡೆದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ವೀರಾಜಪೇಟೆಯ ತ್ರಿವೇಣಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪುಣ್ಯ ಚಿನ್ನದ ಪದಕಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಪುಣ್ಯ ಮುದ್ದು-ದಿವ್ಯ ದಂಪತಿಯ ಪುತ್ರಿಯಾಗಿದ್ದು, ಇಲ್ಲಿನ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ.