ವೀರಾಜಪೇಟೆ, ಡಿ. 31: ಪೊಲೀಸ್ ಅನುಮತಿ ರಹಿತವಾಗಿ ಸಾರ್ವಜನಿಕ ಸ್ಥಳದಲ್ಲಿ ಧ್ವನಿವರ್ಧಕ ಬಳಸಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದ ನಾಗೇಶ್ ಎಂಬಾತನಿಗೆ ಇಲ್ಲಿನ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯ ರೂ. 500 ದಂಡ ವಿಧಿಸಿದೆ.

ತಾ. 29 ರಂದು ರಾತ್ರಿ 9 ಗಂಟೆ ಸಮಯದಲ್ಲಿ ಇಲ್ಲಿನ ಪಂಜರ್‍ಪೇಟೆಯ ಸೆರಿನಿಟಿ ಹಾಲ್‍ನ ಮುಂಭಾಗದ ರಸ್ತೆಯಲ್ಲಿ ಪಿಕ್‍ಅಪ್ ಜೀಪಿನಲ್ಲಿ ಡಿ.ಜೆ. ಯೊಂದಿಗೆ ಪಂದ್ಯದ ವಿಜಯೋತ್ಸವವನ್ನು ಸಂಭ್ರಮಿಸುತ್ತಿದ್ದಾಗ ನಗರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮರಿಸ್ವಾಮಿ ಸಿಬ್ಬಂದಿಗಳು ಪತ್ತೆಹಚ್ಚಿ ಧ್ವನಿ ವರ್ಧಕದ ಸೆಟ್‍ಗಳನ್ನು ವಶಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.