ಹೊಸದೆಹಲಿ, ಡಿ. 31: ಪಾನ್ ಕಾರ್ಡ್, ಆಧಾರ್ ಕಾರ್ಡ್ ಸಂಖ್ಯೆ ಜೋಡಣೆಗೆ ಕೇಂದ್ರ ಸರಕಾರ ಮತ್ತೆ ಕಾಲಮಿತಿಯನ್ನು ವಿಸ್ತರಿಸಿದೆ. ಮುಂದಿನ ವರ್ಷದ ಮಾರ್ಚ್‍ವರೆಗೆ ಗಡುವು ನೀಡಲಾಗಿದೆ. ಆಧಾರ್ ಮತ್ತು ಪಾನ್‍ಕಾರ್ಡ್ ಸಂಖ್ಯೆ ಜೋಡಣೆಗೆ ಕಾಲಮಿತಿಯನ್ನು ಕೇಂದ್ರ ಸರಕಾರ 2020ರ ಮಾರ್ಚ್‍ವರೆಗೆ ವಿಸ್ತರಿಸಿದೆ.

ಈ ಮುನ್ನ ನೀಡಿದ ಸೂಚನೆ ಅನುಸಾರ ಜೋಡಣೆಗೆ ಡಿಸೆಂಬರ್ 31 ಕೊನೆಯ ದಿನವಾಗಿತ್ತು. ಇದರಿಂದ ಪಾನ್ ಮತ್ತು ಆಧಾರ್ ಸಂಖ್ಯೆಗಳನ್ನು ಜೋಡಿಸಲು ಹೆಚ್ಚಿನ ಸಮಯ ದೊರೆಯಲಿದ್ದು, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಇದೀಗ 6ನೆಯ ಬಾರಿಗೆ ಈ ಕಾಲಾವಧಿಯನ್ನು ವಿಸ್ತರಿಸುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಮಹತ್ವದ ಆಧಾರ್ ಯೋಜನೆಗೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು.

ವೈಯಕ್ತಿಕ ಬೆರಳಚ್ಚು ಗುರುತನ್ನು ಪಾನ್ ಸಂಖ್ಯೆ ಪಡೆಯಲು ಮತ್ತು ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಕೆಗೆ ಇದನ್ನು ಕಡ್ಡಾಯಗೊಳಿಸಿತ್ತು.

ಲಿಂಕ್ ಆಗಿದೆಯೇ ಎಂದು ತಿಳಿಯುವುದು ಹೇಗೆ?

ನಿಮ್ಮ ಪಾನ್ ಮತ್ತು ಆಧಾರ್ ಈಗಾಗಲೇ ಲಿಂಕ್ ಆಗಿವೆಯೇ? ಇಲ್ಲವೇ ಎಂಬ ಬಗ್ಗೆ ಅನುಮಾನ ನಿಮ್ಮಲ್ಲಿರಬಹುದು. ಈ ಬಗ್ಗೆ ದೃಢೀಕರಿಸಿಕೊಳ್ಳಲು.

1. ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‍ಸೈಟ್‍ಗೆ ಭೇಟಿ ನೀಡಿ: hಣಣಠಿs://ತಿತಿತಿ. iಟಿಛಿomeಣಚಿxiಟಿಜiಚಿeಜಿiಟiಟಿg.gov.iಟಿ

2. ವೆಬ್‍ಸೈಟ್‍ನ ಹೋಮ್ ಪೇಜ್‍ನ ಎಡಭಾಗದಲ್ಲಿರುವ ಐiಟಿಞ ಂಚಿಜhಚಿಚಿಡಿ ಎನ್ನುವುದನ್ನು ಕ್ಲಿಕ್ ಮಾಡಿ. ಆ ಪುಟದಲ್ಲಿ 'ನೀವು ಈಗಾಗಲೇ ಲಿಂಕ್ ಮಾಡಿದ್ದರೆ, ಅದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ' ಎನ್ನುವರ್ಥದ ಸಂದೇಶ ಕಾಣಿಸುತ್ತದೆ. ಅಲ್ಲಿರುವ ಐiಟಿಞ ಂಚಿಜhಚಿಚಿಡಿ ಅನ್ನುವುದನ್ನು ಕ್ಲಿಕ್ ಮಾಡಿ.

3. ನಿಮ್ಮ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ಅಲ್ಲಿ ಕೊಟ್ಟಿರುವ ಖಾಲಿ ಬಾಕ್ಸ್‍ಗಳಲ್ಲಿ ಭರ್ತಿ ಮಾಡಿ. ಗಿieತಿ ಐiಟಿಞ ಂಚಿಜhಚಿಚಿಡಿ Sಣಚಿಣus ಅನ್ನುವುದನ್ನು ಕ್ಲಿಕ್ ಮಾಡಿ. ಆಗ ನಿಮ್ಮ ಕಾರ್ಡ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎನ್ನುವ ಸಂದೇಶವು ತೆರೆ ಮೇಲೆ ಕಾಣಿಸುತ್ತದೆ.