ಗೋಣಿಕೊಪ್ಪ ವರದಿ, ಡಿ. 31 ; ಚೆನ್ನೈ ವಿಶ್ವವಿದ್ಯಾಲಯ ವತಿಯಿಂದ ಅಲ್ಲಿನ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ವಿಶ್ವ ವಿದ್ಯಾಲಯ ಮಟ್ಟದ ಮಹಿಳಾ ಹಾಕಿ ಟೂರ್ನಿಯಲ್ಲಿ ಕೊಡಗು ಜಿಲ್ಲೆ ಆಟಗಾರರನ್ನು ಒಳಗೊಂಡಿರುವ ಮಂಗಳೂರು ವಿಶ್ವವಿದ್ಯಾಲಯ ತಂಡವು ಎರಡು ಜಯ ಸಾಧಿಸುವ ಮೂಲಕ ಮುನ್ನಡೆ ಕಾಯ್ದುಕೊಂಡಿದೆ.
ಸೋಮವಾರದಿಂದ ಆರಂಭ ಗೊಂಡಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ವಿವಿ ವಿರುದ್ಧ 1-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.. ಮಂಗಳೂರು ವಿವಿ ಪರ ಮಡಿಕೇರಿ ಎಫ್‍ಎಂಸಿ ಕಾಲೇಜು ತಂಡದ ಆಟಗಾರ್ತಿ ಚೆಲುವಾಂಬ ಏಕೈಕ ಗೋಲು ಹೊಡೆದರು.
ಮಂಗಳವಾರ ನಡೆದ 2 ನೇ ಪಂದ್ಯದಲ್ಲಿ ಕ್ಯಾಲಿಕಟ್ ವಿವಿ ವಿರುದ್ಧ 1-0 ಗೋಲುಗಳ ಗೆಲುವು ದಾಖಲಿಸಿರುವ ಮಂಗಳೂರು ತಂಡದ ಪರವಾಗಿ ಮಡಿಕೇರಿ ಎಫ್‍ಎಂಸಿ ಆಟಗಾರ್ತಿ ಪವಿತ್ರ ಗೋಲು ದಾಖಲಿ ಸಿದರು. 3 ನೇ ಪಂದ್ಯ ಬುಧವಾರ ಮೈಸೂರು ವಿಶ್ವವಿದ್ಯಾಲಯ ತಂಡವನ್ನು ಎದುರಿಸಲಿದೆ.