ಶನಿವಾರಸಂತೆ, ಡಿ. 31: ಶನಿವಾರಸಂತೆ ಸಮೀಪದ ಅಂಕನಹಳ್ಳಿ ಮೈಪಾಥಪುರ ಗ್ರಾಮದ ನಿವಾಸಿ ಎಂ.ಎಂ. ಸಿದ್ದಯ್ಯ ನಿನ್ನೆ ಸಂಜೆ ತನ್ನ ಬೈಕ್ (ಕೆ.ಎ.12 ಬಿ.0183)ನಲ್ಲಿ ಶನಿವಾರಸಂತೆಯ ಕಡೆಗೆ ಬರುತ್ತಿರುವಾಗ ಗುಡುಗಳಲೆ ಬಳಿ ಮುಂಭಾಗದಿಂದ ಬರುತ್ತಿದ್ದ ಕಾರಿನ (ಕೆ.ಎ.12 ಎಂ.ಎ.6196) ಹಿಂಭಾಗದ
(ಮೊದಲ ಪುಟದಿಂದ)ಚಕ್ರ ಒಡೆದು ಹೋಗಿ, ಬೈಕಿನ ಮುಂಭಾಗದ ಚಕ್ರಕ್ಕೆ ಬಡಿದಿದೆ. ಬೈಕ್ ಸವಾರರಿಬ್ಬರು ಕೆಳಗೆ ಬಿದ್ದು; ಗಾಯಗೊಂಡಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಸವಾರರಿಬ್ಬರನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದ್ದು; ತಲೆ, ಭುಜ, ಕೈಗೆ ಪೆಟ್ಟಾಗಿದೆ.