ನಾಪೋಕ್ಲು, ಡಿ. 31: ಆಸ್ತಿ ವೈಷ್ಯಮದಿಂದ ಆಕ್ರೋಶಗೊಂಡಿದ್ದ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಡದಿಯ ಹತ್ಯೆಗೆ ಸಂಚು ರೂಪಿಸಿ; ಇದೀಗ ಜೈಲು ಪಾಲಾಗಿರುವ ಪ್ರಸಂಗವೊಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಎಂ.ಎನ್. ಸುಬ್ಬಯ್ಯ ಜೈಲು ಪಾಲಾಗಿದ್ದು; ಆರೋಪಿಯ ಅತ್ತಿಗೆ ರೇಖಾ ಪೂವಯ್ಯ ನೀಡಿರುವ ದೂರಿನ ಮೇರೆಗೆ; ನಾಪೋಕ್ಲು ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.
ಘಟನೆ ಹಿನ್ನೆಲೆ : ಪಿರ್ಯಾದಿದಾರರು ನೀಡಿರುವ ಪುಕಾರಿನ ಪ್ರಕಾರ ಕಳೆದ ಅಕ್ಟೋಬರ್‍ನಿಂದ ಇದೇ ತಾ. 28 ರವರೆಗೆ ನಿರಂತರವಾಗಿ ಕಿರುಕುಳ ದೊಂದಿಗೆ ಆರೋಪಿಯೂ ಕೊಲೆ ಬೆದರಿಕೆ ಹಾಕುತ್ತಿರುವದಾಗಿ ಪುಕಾರಿನಲ್ಲಿ ವಿವರಿಸಿದ್ದು; ಈ ಸಂಬಂಧ ಸೂಕ್ತ ರಕ್ಷಣೆ ನೀಡುವಂತೆ ಮಹಿಳೆ ಕೇಳಿಕೊಂಡಿದ್ದಾರೆ. ಅಲ್ಲದೆ ಆರೋಪಿಯು ಅಸ್ಸಾಂ ಮೂಲದವರೆಂದು ಹೇಳಿ ಕೊಂಡಿರುವ ಕಾರ್ಮಿಕರ ತಂಡವೊಂದಕ್ಕೆ ಈ ಕೃತ್ಯವೆಸಗಲು ಸುಪಾರಿ ನೀಡಿದ್ದಾಗಿ ಬಹಿರಂಗ ಗೊಳಿಸಿದ್ದಾರೆ.
(ಮೊದಲ ಪುಟದಿಂದ) ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ತುರ್ತು ಮಾಹಿತಿ ಕಲೆ ಹಾಕುವ ಮೂಲಕ ಕೆಳ ಹಂತದ ಅಧಿಕಾರಿಗಳಿಗೆ ತನಿಖೆಗೆ ಸೂಚಿಸಿದ್ದಾಗ ವಿಷಯ ಬೆಳಕಿಗೆ ಬಂದಿದೆ. ಆ ಪ್ರಕಾರ ಆಸ್ತಿಗಾಗಿ ಅತ್ತಿಗೆಯನ್ನು ಕೊಲೆ ಮಾಡಲು ಆರೋಪಿಯು ಹೊರ ರಾಜ್ಯದ ಕಾರ್ಮಿಕರಿಗೆ ರೂ. 50 ಸಾವಿರದಿಂದ 5 ಲಕ್ಷದವರೆಗೆ ಹಣ ನೀಡುವುದಾಗಿ ಸುಪಾರಿ ನೀಡಿರುವುದಾಗಿ ಮಾಹಿತಿ ಲಭಿಸಿದೆ. ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 115ರ ಅನ್ವಯ ಕ್ರಮ ಕೈಗೊಂಡಿದ್ದು; ಆರೋಪಿ ಸುಬ್ಬಯ್ಯ ಬಂಧನದೊಂದಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. -ಪ್ರಭಾ