ಶನಿವಾರಸಂತೆ, ಡಿ. 30: ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದ ಯುವಕ ಸಚಿನ್ (21) ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿರುತ್ತಾನೆ.
ಅಪ್ಪಶೆಟ್ಟಳ್ಳಿ ಗ್ರಾಮದ ಕನ್ನಳ್ಳಿ ಕೆ.ಎಂ. ಲೋಕೇಶ್ ಅವರ ಮಗ ಸಚಿನ್ ಭಾನುವಾರ ರಾತ್ರಿ ತನ್ನ ಮೋಟಾರ್ ಸೈಕಲ್ (ನಂ. ಕೆಎ 12 ಎಸ್ 5414)ನಲ್ಲಿ ತನ್ನ ವಾಹನವೊಂದರ ಬಾಡಿಗೆ ವಸೂಲಿ ಮಾಡಲು ಯಸಳೂರು ಹೋಬಳಿಯ ಕೆರೋಡಿಯ ಗೋಪಾಲ ಗ್ರಾಮದ ಮುಖ್ಯ ರಸ್ತೆಯಲ್ಲಿ ತೆರಳುತ್ತಿರುವಾಗ ಎದುರುಗಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್‍ಗೆ ಡಿಕ್ಕಿ (ನಂ. ಕೆಎ 46 5719) ಪಡಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಯಸಳೂರು ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ. ಮೃತ ಸಚಿನ್ ತಂದೆ, ತಾಯಿ, ಈರ್ವರು ಸಹೋದರಿಯರನ್ನು ಅಗಲಿರುತ್ತಾನೆ.