ವೀರಾಜಪೇಟೆ, ಡಿ. 30: ಯಾರು ಯಾರಲ್ಲಿ ನಂಬಿಕೆ ಇಡುತ್ತಾರೋ ಅಂತವರಿಗೆ ಸಾಧನೆ ಮಾಡಲು ಅವಕಾಶವಿರುತ್ತದೆ. ತಾನು ಇದೇ ರೀತಿಯಲ್ಲಿ ನಂಬಿಕೆ ಇಟ್ಟಿದ್ದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ ಆಗಲು ಸಾಧ್ಯವಾಯಿತು. ಇಂದಿನ ಕ್ರೀಡಾಪಟುಗಳಲ್ಲಿ ಛಲ, ಕಿಚ್ಚು, ಗುರಿ ಇದ್ದರೆ ಏನನ್ನು ಬೇಕಾದರೆ ಸಾಧಿಸಬಹುದು ಎಂದು ಮಾಜಿ ಅಂತರಾಷ್ಟ್ರೀಯ ಕ್ರೀಡಾಪಟು ತೀತಮಾಡ ಅರ್ಜುನ್ ದೇವಯ್ಯ ಹೇಳಿದರು.ವೀರಾಜಪೇಟೆಯ ಯೂತ್ ಫ್ರೆಂಡ್ಸ್ ವತಿಯಿಂದ ಸಂತ ಅನ್ನಮ್ಮ ಕಾಲೇಜು ಮ್ಯೆದಾನದಲ್ಲಿ ಆರು ದಿನಗಳಿಂದ ಆಯೋಜಿಸಿದ್ದ ವೀರಾಜಪೇಟೆ ಪ್ರೀಮಿಯರ್ ಲೀಗ್ (ವಿಪಿಎಲ್) ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು; ಒಂದು ಕ್ರೀಡಾ ಕೂಟದಲ್ಲಿ ಸೋತರೆ ವಿಷಾದದಿಂದ ಯಾರೂ ಮುಂದಿನ ಸಾಧನೆಗೆ ತಯಾರಿ ಮಾಡಿಕೊಳ್ಳುವುದಿಲ್ಲ; ಅಂತಹವರು ಜೀವನದಲ್ಲಿಯೇ ಸೋಲುವ ರೀತಿಯ ಕಲ್ಪನೆ ಮೂಡಲಿದೆ. ಸೋಲನ್ನು ಪಾರದರ್ಶಕವಾಗಿ ತೆಗೆದುಕೊಂಡು ಛಲವನ್ನು ಮುಂದುವರೆಸಿದರೆ ಮುಂದೆ ಗೆಲ್ಲುತ್ತೇನೆ ಎಂಬ ಕಿಚ್ಚು ಮನಸ್ಸಿನಲ್ಲಿ ಬೇರೂರಿ ಅದು ಸಾಧನೆಯಾಗಲಿದೆ. ಸಾಧನೆ ಮಾಡುವುದಕ್ಕಿಂತ ಮುಂಚೆ ಸಾಧನೆ ಅನ್ನೊದು ಏನು ಅನ್ನೊದನ್ನ ಅರಿಯಬೇಕು. ಪ್ರತಿಭೆ ಎಂಬದಕ್ಕೆ ಧರ್ಮ, ಜಾತಿ, ಬೇಧ-ಭಾವ ಇಲ್ಲ, ಇಲ್ಲಿ ಸಾಧನೆಯೇ ಮುಖ್ಯ ಗುರಿಯಾಗಿದ್ದು ಈ ಸಾಧನೆ ಇತರರಿಗೆ ಮಾದರಿಯಾಗಬೇಕು. ಉತ್ತಮವಾದ ಸಮಾಜದಲ್ಲಿ ಯಾವುದೋ ಬೆರಳೆಣಿಕೆಯಷ್ಟು ಜನ ಹುಳಿ ಹಿಂಡಿ ಸಮಾಜದ ಶಾಂತಿ ನೆಮ್ಮದಿಯನ್ನು ಕದಡುವವರನ್ನು ಗುರುತಿಸಿ ಅವರಿಗೆ ಸಮಾಜವೇ ಸರಿಯಾದ ರೀತಿಯಲ್ಲಿ ಉಪಚರಿಸಿದರೆ ಮುಂದೆ ಅವರುಗಳು ಅಂತಹ ಕೆಲಸಕ್ಕೆ ಹೋಗುವುದಿಲ್ಲ. ಇಂದು ಯಾರೇ

(ಮೊದಲ ಪುಟದಿಂದ) ಆಗಲಿ ತಾಯಿಯನ್ನು ಪ್ರೀತಿಸುವವರು ತಾಯ್ನಾಡನ್ನು ಪ್ರೀತಿಸುತ್ತಾರೆ ಎಂದು ಹೇಳಿದರು.

ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಎಲ್ಲ ಜಾತಿ, ಧರ್ಮ, ಪಂಕ್ತಿಯನ್ನು ಪ್ರ್ರೀತಿಸಿ ಗೌವರವಿಸು ವವರು ನಿಜವಾದ ಭಾರತೀಯ ನಾಗಲು ಸಾಧ್ಯ. ಇದರಿಂದ ಎಲ್ಲರ ನಡುವೆ ಪರಸ್ಪರ ಸೌಹಾರ್ದತೆ, ಬಾಂಧವ್ಯ ಸಾಮರಸ್ಯ ಉಂಟಾಗಲಿದೆ. ಕ್ರೀಡೆಗಳು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದುದಲ್ಲ. ಜಿಲ್ಲೆಯಲ್ಲಿ ಕ್ರೀಡೆಗಳು ಜಾತಿ ಆಧಾರದಲ್ಲಿ ನಡೆಯುತ್ತಿದೆ. ಯಾರ್ಯಾರಿಗೆ ಅರ್ಹತೆ ಇದೆ ಅಂತವರು ಕ್ರೀಡೆಯಲ್ಲಿ ಮುಂದೆ ಬರುತ್ತಾರೆ. ಕ್ರೀಡೆಯ ಅರ್ಹತೆಯನ್ನು ರಾಜಕೀಯಕ್ಕೆ ಬೆರೆಸಿ ಅಳೆಯುವುದು ಸರಿಯಲ್ಲ. ಜಾತ್ಯತೀತ ಬಹು ಸಂಸ್ಕøತಿಯ ದೇಶದಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಬೆಂಗಳೂರು ಟೀಮ್ ರೋಲೋ ಸ್ಕೇಟಿಂಗ್ ಅಕಾಡೆಮಿ ಅಧ್ಯಕ್ಷ ಮುಕ್ಕಾಟ್ಟಿರ ಎಸ್. ಪೂವಯ್ಯ, ಕ್ರೇಡೋ ಮೆಡಿಕಲ್‍ನ ಸಂಸ್ಥಾಪಕ ಕಟ್ಟೇರÀ ಪೂಣಚ್ಚ, ಆರ್ಜಿ ಉಂಬಳ ಮನೆ ಮಾಲೀಕ ಬಿ.ಜೆ ಬೋಪಣ್ಣ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಹಮದ್ ರಾಫಿ, ಡಿ.ಪಿ. ರಾಜೇಶ್, ಉದ್ಯಮಿ ಮೋಹಿನ್, ಜೆಡಿಎಸ್ ನಗರ ಅಧ್ಯಕ್ಷ ಪಿ.ಎ. ಮಂಜುನಾಥ್, ಉದ್ಯಮಿಗಳಾದ ಪ್ರವೀಣ್, ವಿಕ್ಕಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಭಿಮನ್ಯು (ಕರಾಟೆ), ಮುಂಡಚಾಡಿರ ರಜತ್ (ವಾಲಿಬಾಲ್), ಸಿದ್ದಲಿಂಗ (ಮುಳುಗು ತಜ್ಞ), ಷಾಹಿದ್ (ಅಂತರಾಷ್ಟ್ರಿಯ ರ್ಯಾಲಿಪಟು), ಮಹಮದ್ ಫಾಯಿದ್ (ಷಟಲ್ ಬ್ಯಾಡ್‍ಮಿಂಟನ್), ಅಲ್ಬರ್ಟ್ (ನಿವೃತ್ತ ಶಿಕ್ಷಕ) ಇವರುಗಳನ್ನು ಸನ್ಮಾನಿಸ ಲಾಯಿತು.

ಮನ್ನಾ ಸೂಪರ್ ಕಿಂಗ್ ಚಾಂಪಿಯನ್

ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಯೂತ್ ಫ್ರೆಂಡ್ಸ್ ವಿಪಿಎಲ್ ಪಂದ್ಯಾಟದಲ್ಲಿ ಮನ್ನಾ ಸೂಪರ್ ಕಿಂಗ್ಸ್ ತಂಡ ಲಿತೀನ್ ಕ್ರಿಕೆಟರ್ಸ್ ತಂಡವನ್ನು ಮಣಿಸಿ 75 ಸಾವಿರ ನಗದು ಹಾಗೂ ಟ್ರೋಪಿಯನ್ನು ತನ್ನದಾಗಿಸಿ ಕೊಂಡಿತು.

ಪಂದ್ಯಾಟದಲ್ಲಿ ಮೊದಲು ಟಾಸ್ ಗೆದ್ದು ಮನ್ನಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಲಿತೀನ್ ಕ್ರಿಕೆಟರ್ಸ್ 10 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 56 ರನ್ ಕಲೆ ಹಾಕಿತು. ವಿರುದ್ಧವಾಗಿ ಆಡಿದ ಮನ್ನಾ ಸೂಪರ್ ಕಿಂಗ್ಸ್ ತಂಡ 8.3 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿ ಪಂದ್ಯದ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಪಂದ್ಯಾಟದಲ್ಲಿ 12 ಪ್ರಾಂಚೇಸಿಗಳು ಪಾಲ್ಗೊಂಡಿದ್ದವು. ವಿಪಿಎಲ್ ಮಾದರಿಯಲ್ಲಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು.

ಪಂದ್ಯಾಟದಲ್ಲಿ ಸರಣಿ ಪುರುಷೋತ್ತಮ ನಿಶಾದ್(ಮನ್ನಾ ಸೂಪರ್ ಕಿಂಗ್ಸ್), ಉತ್ತಮ ಕೀಪರ್ ಗಣೇಶ್ (ಲಿತೀನ್ ಕ್ರಿಕೆಟರ್ಸ್), ಉತ್ತಮ ಬೌಲರ್ ನಿತಿನ್ (ಸ್ಪೈಸ್11), ಉತ್ತಮ ಕ್ಯಾಚ್ ಹಕೀಬ್ (ಸ್ಪೈಸ್11), ಉತ್ತಮ ಫೀಲ್ಡ್‍ರ್ಯಾಹಿನ್ (ರಾಯಲ್ ಫ್ರೆಂಡ್ಸ್), ಉದಯೋನ್ಮುಖ ಆಟಗಾರ ಅಫ್ರೋಝ್ (ರಾಯಲ್ ಫ್ರೆಂಡ್ಸ್), ಉತ್ತಮ ಆಲ್‍ರೌಂಡರ್ ಅಜಯ್ (ಲಿತೀನ್ ಕ್ರಿಕೆಟರ್ಸ್) ಉತ್ತಮ ಟೀಮ್ (ಕೌಬಾಯ್ಸ್) ಪ್ರಶಸ್ತಿಗಳನ್ನು ಪಡೆದುಕೊಂಡರು. ಆಶಿಫ್ ಹಾಗೂ ಮುತ್ತಮ್ಮ ಪಂದ್ಯದ ವೀಕ್ಷಕ ವಿವರಣೆ ನೀಡಿದರು.