ಒಡೆಯನಪುರ, ಡಿ. 30: ಇತ್ತೀಚಿಗೆ ಅರಕಲಗೂಡಿನ ಶಿಕ್ಷಕರ ಭವನದಲ್ಲಿ ಹಾಸನದ ನ್ಯಾಷನಲ್ ಶೋಟಕಾನ್ ಕರಾಟೆ ಮಲ್ಟಿಪರ್ಪಸ್ ಸಂಸ್ಥೆ ಆಯೋಜಿಸಿದ್ದ 3ನೇ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಷಿಪ್ ಪಂದ್ಯಾವಳಿ ಯಲ್ಲಿ ಭಾಗವಹಿಸಿದ ಕೊಡ್ಲಿಪೇಟೆ ಮತ್ತು ಶನಿವಾರಸಂತೆಯ ಕರಾಟೆ ವಿದ್ಯಾರ್ಥಿಗಳು ‘ಕಟಾ’ ಮತ್ತು ‘ಕುಮಿತೆ’ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸುವುದರೊಂದಿಗೆ ಚಾಂಪಿಯನ್ಶಿಪ್ ಹಾಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕಟಾ ವಿಭಾಗದಲ್ಲಿ ಕೆ. ಆರ್. ತರುಣ್, ಕೆ.ಡಿ.ದಿನಕ್ ದ್ವಿತೀಯ ಮತ್ತು ಎನ್. ಸುಮಂತ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕುಮಿತೆ ವಿಭಾಗದಲ್ಲಿ ವಿ.ಎಸ್. ಶ್ರೇಯಾ, ಎಂ.ವಿ.ಅನನ್ಯ, ಕೆ. ಪಿ. ಸಾತ್ವಿಕ್, ಬಿ. ಕೆ. ಗಗನ್ ಪ್ರಥಮ ಸ್ಥಾನಗಳಿಸಿದ್ದಾರೆ. ಬಿ.ವನಿತ್ಕುಮಾರ್, ಬಿ.ಪಿ.ಮನ್ವಿತ್, ಬಿ.ಜೆ.ತನ್ವಯ್, ಡಿ.ಪಿ.ಯಶ್ವಂತ್ ಮತ್ತು ವಿ.ಎಸ್.ಅನೀಸ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕೆ.ಗಗನ್ದೀಪ್, ಮಹಮ್ಮದ್ ರಿಜ್ವನ್, ಮಹಮ್ಮದ್ ಜನೋವರ್ ಮತ್ತು ಬಿ.ಪಿ.ದೈವಿಕ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ತರಬೇತುದಾರ ಬಿ. ಕೆ. ಪರಮೇಶ್ ತಿಳಿಸಿದ್ದಾರೆ. - ವಿ. ಸಿ. ಸುರೇಶ್