ಮಡಿಕೇರಿ, ಡಿ. 30: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿಯ ವಿಭಾಗದಲ್ಲಿ ಖಾಲಿಯಿರುವ ಚಾಲಕ ಹಾಗೂ ಚಾಲಕ-ಕಂ-ನಿರ್ವಾಹಕರ ಒಟ್ಟು 2,500 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ವಿವರಗಳು: ಚಾಲಕ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಚಾಲ್ತಿಯಲ್ಲಿರುವ ಭಾರೀ ಸರಕು ಸಾಗಾಣಿಕಾ ವಾಹನ ಚಾಲನಾ ಪರವಾನಿಗೆ ಹೊಂದಿ ಕನಿಷ್ಟ 2 ವರ್ಷಗಳಾಗಿರಬೇಕು ಮತ್ತು ಪ್ರಯಾಣಿಕರ ಭಾರೀ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‍ವಿ ಬ್ಯಾಡ್ಜ್ ಹೊಂದಿರಬೇಕು. ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಚಾಲ್ತಿಯಲ್ಲಿರುವ ಭಾರೀ ಸರಕು ಸಾಗಾಣಿಕ ವಾಹನ ಚಾಲನಾ ಪರವಾನಿಗೆ ಹೊಂದಿ ಕನಿಷ್ಟ 2 ವರ್ಷಗಳಾಗಿರಬೇಕು ಮತ್ತು ಪ್ರಯಾಣಿಕರ ಭಾರೀ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‍ವಿ ಬ್ಯಾಡ್ಜ್ ಹೊಂದಿರಬೇಕು. ಚಾಲ್ತಿಯಲ್ಲಿರುವ ನಿರ್ವಾಹಕ ಪರವಾನಗಿ ಮತ್ತು ಕರ್ನಾಟಕ ಬ್ಯಾಡ್ಜ್ ಹೊಂದಿರಬೇಕು.
ದೈಹಿಕ ಮಾನದಂಡಗಳು: ಎತ್ತರ ಪುರುಷರಿಗೆ ಕನಿಷ್ಟ 163 ಸೆಂ.ಮೀ., ಮಹಿಳೆಯರಿಗೆ ಕನಿಷ್ಟ 153 ಸೆಂ.ಮೀ., ತೂಕ: ಪುರುಷರಿಗೆ ಕನಿಷ್ಟ 55, ಮಹಿಳೆಯರಿಗೆ ಕನಿಷ್ಟ 50 ಕೆ.ಜಿ. 8.1.2020ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು ಕನಿಷ್ಟ 24 ವರ್ಷದವರಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಅರ್ಜಿ ಸಲ್ಲಿಸಲು ಜನವರಿ 8 ಕೊನೆಯ ದಿನವಾಗಿದೆ.
ಶುಲ್ಕ ಪಾವತಿಸುವ ವಿಧಾನ: ತಿತಿತಿ.ಟಿತಿಞಡಿಣಛಿ.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಚಲನ್ ಡೌನ್‍ಲೋಡ್ ಮಾಡಿಕೊಂಡು ನಿಗದಿತ ಅರ್ಜಿ ಶುಲ್ಕವನ್ನು ಯಾವುದೇ ಇಲೆಕ್ಟ್ರಾನಿಕ್ ಅಂಚೆ ಕಚೇರಿಯಲ್ಲಿ ಇ-ಪೇಮೆಂಟ್ ಮೂಲಕ ಸಂದಾಯ ಮಾಡುವುದು. ಶುಲ್ಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ವರ್ಗ-1/ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ ರೂ. 300, ಪ್ರವರ್ಗ-2ಎ/2ಬಿ/3ಎ/3ಬಿ/ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 600, ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್: ತಿತಿತಿ.ಟಿತಿಞಡಿಣಛಿ.iಟಿ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಸಿ. ಜಗನ್ನಾಥ್ ತಿಳಿಸಿದ್ದಾರೆ.