ವೀರಾಜಪೇಟೆ, ಡಿ.30: ವೀರಾಜಪೇಟೆ ತಾಲೂಕುವಿನ ವಿ. ಬಾಡಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸಮುದಾಯದ ನಡೆ ಶಾಲೆಯ ಕಡೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜ್ಞಾನ ವಸ್ತು ಪ್ರದರ್ಶನ ಕೊಠಡಿ ಯನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ ಅವರು ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಮುನ್ನಡೆದಿರುವುದು ಸಂತೋಷ ದಾಯಕ. ಜ್ಞಾನದಿಂದ ವಿಜ್ಞಾನ ಎಂಬುದನ್ನು ಅಳವಡಿಸಿಕೊಂಡು ಶಿಕ್ಷಣದಲ್ಲಿ ಮುಂದುವರೆಯಬೇಕು ಎಂದು ಸಲಹೆ ನೀಡಿದರು.
ವೀರಾಜಪೇಟೆ ಕ್ಷೇತ್ರ ಶೀಕ್ಷಣಾಧಿ ಕಾರಿ ಶ್ರೀಶೈಲ ಬೆಳಗಿ ಮಾತನಾಡಿ; ಈ ಕ್ಷೇತ್ರದಲ್ಲಿ ಸಮುದಾಯದಿಂದ ಹಲವಾರು ಸಹಾಯ ಹಸ್ತ ಈ ಶಾಲೆಗೆ ಲಭಿಸಿದೆ; ಎರಡು ಕೊಠಡಿ ಗಳಿಂದ ಇಂದು 1ನೇ ತರಗತಿಯಿಂದ 5ನೇ ತರಗತಿಯವರೆಗೆ ವಿಸ್ತರಿಸಿದೆ ಆದರೆ ಶಾಲೆಯಲ್ಲಿ ಇಂದು ಮಕ್ಕಳ ಕೊರತೆ ಪ್ರಮುಖವಾಗಿ ಗೋಚರಿಸು ತಿದ್ದೆ ಜನಸಾಮಾನ್ಯರು ಮಕ್ಕಳನ್ನು ಓದಿಸುವ ಕಾರ್ಯದಲ್ಲಿ ತೊಡಗಿಸಿ ದಲ್ಲಿ ಶಾಲೆಯು ಉನ್ನತಿಯತ್ತ ಸಾಗುವಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ಗಿರಿ ಮೊಣ್ಣಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕಾರ್ಮಿಕ ಕುಟುಂಬ ವರ್ಗದವ ರಾಗಿದ್ದು; ಮಕ್ಕಳ ಕೊರತೆಯಿದೆ. ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಅಂಗ್ಲ ಮಾದ್ಯಮ ಜಾರಿಗೆ ತಂದಲ್ಲಿ ಈ ಭಾಗದಲ್ಲಿ ಹೆಚ್ಚು ಮಕ್ಕಳು ದಾಖಲಾಗಬಹುದು ಎಂದು ಹೇಳಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕೊಂಗಂಡ ಕಾಶಿ ಕಾರ್ಯಪ್ಪ, ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ಗೀತಾಂಜಲಿ, ಸಿ.ಆರ್.ಪಿ. ವೆಂಕಟೇಶ್, ಅಮ್ಮಣಿಚಂಡ ಗಣೇಶ್ ಮಾದಪ್ಪ, ದಮಯಂತಿ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಹೆಚ್. ಎ. ರಾಜಮ್ಮ ವರದಿ ವಾಚಿಸಿದರು. ಸಹ ಶಿಕ್ಷಕಿ ಕಾವೇರಮ್ಮ ವಂದಿಸಿದರು. ಶಾಲಾ ವಿದ್ಯಾರ್ಥಿ ಗಳಿಂದ ಅಕರ್ಷಕ ಪಥ ಸಂಚಲನ, ಯೋಗ, ಕವಾಯತು ದೇಶಿಯ ಗೀತೆ ಮತ್ತು ನಾಡಗೀತೆ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಪೂವ್ವಾದಿ ಭಗವತಿ ಮಹಿಳಾ ಸಮಾಜದಿಂದ ಕೋಲಾಟ, ಮಂದತ್ತವ್ವ ಕೊಡವ ಸಾಂಸ್ಕøತಿಕ ಟ್ರಸ್ಟ್ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಸ್ವರಾರ್ಣವ ಸಂಗೀತ ಶಾಲೆ ವೀರಾಜಪೇಟೆ ವತಿಯಿಂದ ಹರದಾಸ ಅಪ್ಪಚ್ಚ ಕವಿ ವಿರಚಿತ ಹಾಡುಗಳು ; ವಿದ್ವಾನ್ ದಿಲಿಕಿಮಾರ್ ಮತ್ತು ಡಿ.ಅಪೂರ್ವ ಹಾಗೂ ಸಂಗಡಿಗ ರಿಂದ ಹಾಡುಗಾರಿಕೆ ಗಮನ ಸೆಳೆಯಿತು.