ಮಡಿಕೇರಿ, ಡಿ. 30: ಮಡಿಕೇರಿ ನಿವಾಸಿ ಪ್ರಸ್ತುತ ಮೈಸೂರಿನ ಚಿನ್ಮಯಿ ವಿದ್ಯಾ ಸಂಸ್ಥೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಜ್ಜೇಟಿರ ಯುಕ್ತ, ರಾಷ್ಟ್ರ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ. ಬೆಂಗಳೂರಿನ ಹಿಂದೂಸ್ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಯುಕ್ತ, ಮಡಿಕೇರಿ ನಿವಾಸಿ ಅಜ್ಜೇಟಿರ ಮೋಹನ್ ಮತ್ತು ಮಮತ ದಂಪತಿಯ ಪುತ್ರಿಯಾಗಿದ್ದು, ಮೈಸೂರಿನ ರಾಮ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾಳೆ.