ಮಡಿಕೇರಿ, ಡಿ. 30 : ವೀರಾಜಪೇಟೆಯ ಸ.ಪ್ರಥಮ ದರ್ಜೆ ಕಾಲೇಜಿನಲ್ಲಿ ಹವ್ಯಾಸಿ ಚಿತ್ರಕಲಾವಿದರಾದ ಸಾದಿಕ್ ಹಂಸ ಹಾಗೂ ಸಾದಿಕ್ ಆರ್ಟ್ ಲಿಂಕ್ ಮತ್ತು ಕನ್ನಡ ಸಂಸ್ಕøತಿ ಇಲಾಖೆ ಆಶ್ರಯ ದಲ್ಲಿ ಆಯೋಜಿಸಿದ್ದ ಮಕ್ಕಳ ಚಿತ್ರಕಲಾ ಉತ್ಸವದಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ. 1 ರಿಂದ 4ನೇ ತರಗತಿ ವಿಭಾಗದಲ್ಲಿ 2ನೇ ತರಗತಿಯ ಆಯೇಷಾ ಶಿeóÁ ಪ್ರಥಮ ಸ್ಥಾನ, 4ನೇ ತರಗತಿಯ ಯಶ್ಮಿತಾ ಕೆ.ಎಂ. ದ್ವಿತೀಯ ಸ್ಥಾನ, 1ನೇ ತರಗತಿಯ ಟಿಯಾರಾ ಮಂದಣ್ಣ ಪಿ. ತೃತೀಯ ಸ್ಥಾನ ಪಡೆದು ಕೊಂಡಿರುತ್ತಾರೆ. 8 ರಿಂದ 10ನೇ ವಿಭಾಗದಲ್ಲಿ 10ನೇ ತರಗತಿಯ ಪ್ರಣವ್ ಪಿ.ಪಿ. ಪ್ರಥಮ ಸ್ಥಾನ, 9ನೇ ತರಗತಿಯ ರಿಧ್ಯಾ ಮುತ್ತಮ್ಮ ಕೆ.ಟಿ. ದ್ವಿತೀಯ ಸ್ಥಾನ ಹಾಗೂ 8ನೇ ತರಗತಿಯ ಲಿತನ್ ಪಿ.ಪಿ. ತೃತೀಯ ಸ್ಥಾನ ಪಡೆದಿದ್ದಾರೆ.