ಶನಿವಾರಸಂತೆ, ಡಿ. 30: ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಶಿರಹಾ ಗ್ರಾಮದಲ್ಲಿ ಸುಮಾರು 45 ಕುಟುಂಬಗಳು ವಾಸಿಸುತ್ತಿದ್ದು; ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಲುವಾಗಿ ಜಿಲ್ಲಾ ಪಂಚಾಯತಿ ಸದಸ್ಯ ಪುಟ್ಟರಾಜು ತಮ್ಮ ಅನುದಾನದಲ್ಲಿ ರೂ. 8 ಲಕ್ಷ ವೆಚ್ಚದ ಗ್ರಾಮೀಣ ಕುಡಿಯುವ ನೀರಿನ (25 ಸಾವಿರ ಲೀಟರ್) ಗ್ರೌಂಡ್‍ಲೆವೆನ್ ನಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಸಂದರ್ಭ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯರು ಗಳಾದ ಎಸ್.ಎಂ. ರೇಣುಕಾ ಮೇದಪ್ಪ, ಬಿ.ಕೆ. ದಿನೇಶ್, ಗುತ್ತಿಗೆದಾರ ಸಿದ್ದಿಕ್, ಗ್ರಾಮಸ್ಥರಾದ ಮೇದಪ್ಪ, ಎಸ್.ಕೆ. ಪರಮೇಶ್, ಎಸ್.ಹೆಚ್. ಶಿವರಾಜ್, ರಾಜೇಶ್, ಸಣ್ಣಯ್ಯ, ದಿನೇಶ್, ರಾಜು, ಅರ್ಚಕ ಶಾಂತಮಲ್ಲಯ್ಯ ಹಾಗೂ ಇತರರು ಉಪಸ್ಥಿತರಿದ್ದರು.