ಚೆಟ್ಟಳ್ಳಿ, ಡಿ. 30: ಕೊಡಗು ಜಿಲ್ಲಾ ಸುನ್ನಿ ಯುವಜನ ಸಂಘ (ಎಸ್.ವೈ.ಎಸ್) ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ಲಾ ಸಖಾಫಿ ಕೊಳಕೇರಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸೈಯ್ಯದ್ ಇಲ್ಯಾಸ್ ಸಖಾಫಿ, ಉಮ್ಮರ್ ಸಖಾಫಿ ಎಡಪಾಲ, ಕಾರ್ಯದರ್ಶಿಯಾಗಿ ವಿ.ಪಿ ಮೊಹಿದ್ದೀನ್ ಪೊನ್ನತ್ಮೊಟ್ಟೆ, ಖಜಾಂಜಿಯಾಗಿ ಇಬ್ರಾಹಿಂ ಕಲ್ಲುಬಾಣೆ, ಇಸಾಬಾ ಕಾರ್ಯದರ್ಶಿ ಯಾಗಿ ಎಂ.ಎ ಅಬೂಬಕರ್ ಕಡಂಗ, ದಹ್ವಾ ಕಾರ್ಯದರ್ಶಿಯಾಗಿ ಹನೀಫ್ ಸಖಾಫಿ ಕೊಂಡಂಗೇರಿರವರನ್ನು ಇತ್ತೀಚಿಗೆ ಕಡಂಗ ಬದ್ರಿಯಾ ಸಂಸ್ಥೆಯಲ್ಲಿ ನಡೆದ ಎಸ್.ವೈ.ಎಸ್ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಮಾಡಿದ್ದಾರೆ.
ಮಹಾಸಭೆಯ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಉಪಖಾಝಿ ಮಹ್ಮೂದ್ ಮುಸ್ಲಿಯಾರ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾದುಲಿ ಫೈಝಿ ನೆರವೇರಿಸಿದರು.
ಸಭೆಯಲ್ಲಿ ಸಂಘಟನೆಯ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ವಿ.ಪಿ ಮೊಹಿದ್ದೀನ್ ಮಂಡಿಸಿದರು, ಹಾಗೂ ಲೆಕ್ಕಪತ್ರವನ್ನು ಯೂಸುಫ್ ಕೊಂಡಂಗೇರಿ ಮಂಡಿಸಿದರು. ಈ ಸಂದರ್ಭ ಎಸ್.ವೈ.ಎಸ್ ಅಧ್ಯಕ್ಷರಾದ ಜಿ.ಎಂ ಸಖಾಫಿ ಪಾಣೆಮಂಗಳೂರು ಇದ್ದರು.