ಸೋಮವಾರಪೇಟೆ, ಡಿ. 30: ಇಲ್ಲಿನ ಶ್ರೀ ನಾರಾಯಣ ಗುರು ಸೇವಾ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಿ.ಎ. ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಮಾನಸ ಸಭಾಂಗಣದಲ್ಲಿ ನಡೆಯಿತು.
ಸಂಘದ ನಿವೇಶನದಲ್ಲಿ ಆದಷ್ಟು ಶೀಘ್ರವಾಗಿ ಭವನ ನಿರ್ಮಾಣ ಮಾಡುವ ಕುರಿತು ಚರ್ಚಿಸಲಾಗಿ, ಸರಕಾರದ ಅನುದಾನಕ್ಕಾಗಿ ಬೇಕಾದ ಅಗತ್ಯ ದಾಖಲೆ ಪತ್ರಗಳನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಯಾಗಲಿದೆ ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.
ಜನಾಂಗ ಬಾಂಧವರುಗಳ ಶ್ರೇಯೋಭಿವೃದ್ಧಿಗಾಗಿ ಸಂಘವು ನಿರಂತರವಾಗಿ ಶ್ರಮಿಸುತ್ತಿದ್ದು, ಸಂಘ ನಡೆಸುವ ಕಾರ್ಯಕ್ರಮಗಳಿಗೆ ಜನಾಂಗ ಬಾಂಧವರು ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಸದಸ್ಯರುಗಳು ಕೈಜೋಡಿಸ ಬೇಕೆಂದು ಅಧ್ಯಕ್ಷರು ಮನವಿ ಮಾಡಿದರು. ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯಿಂದ ನೀಡುವ ಪ್ರೋತ್ಸಾಹ ಧನವನ್ನು ಪದವಿ ಹಾಗೂ ಉನ್ನತ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೂ ನೀಡುವಂತಾಗ ಬೇಕೆಂದು ಸಭೆಯಲ್ಲಿ ಕೆಲವು ಸದಸ್ಯರು ಗಳು ಸಲಹೆ ನೀಡಿದರು. ವಿದ್ಯಾನಿಧಿ ಯಲ್ಲಿ ಸಂಗ್ರಹವಾಗುವ ಹಣವನ್ನು ಪರಿಗಣಿಸಿ, ಅದರಂತೆ ನೀಡಲು ಕ್ರಮ ಕೈಗೊಳ್ಳುವದು ಸೂಕ್ತ ಎಂದು ಅಧ್ಯಕ್ಷರು ಪ್ರತಿಕ್ರಿಯಿಸಿದರು.
ಸಭೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ಕೊಡಗು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಶಿಕ್ಷಕರುಗಳಾದ ಎಚ್.ಬಿ. ಕೃಷ್ಣಪ್ಪ ಹಾಗೂ ಎಸ್.ಕೆ. ರಾಜರತ್ನ ಅವರುಗಳ ಪುತ್ರ ಎಚ್.ಕೆ. ಚಿನ್ಮಯಿ ಅವರನ್ನು ಪ್ರೋತ್ಸಾಹ ಧನ ನೀಡುವದರೊಂದಿಗೆ ಸನ್ಮಾನಿಸಿ, ಗೌರವಿಸಲಾಯಿತು. ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 11 ಮಂದಿ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸ ಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಇಂದಿರಾ ಮೋಣಪ್ಪ ವಾರ್ಷಿಕ ವರದಿ ಹಾಗೂ ಹಿಂದಿನ ಮಹಾಸಭೆ ವರದಿಯನ್ನು ಮಂಡಿಸಿ ದರು. ಲೆಕ್ಕಪರಿಶೋಧನ ವರದಿ ಯನ್ನು ಸಂಘದ ಖಜಾಂಚಿ ಎಂ.ಜಿ. ರಮೇಶ್ ಮಂಡಿಸಿದರು. ವೇದಿಕೆ ಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಕೆ. ಸುಂದರ್ ಉಪಸ್ಥಿತರಿದ್ದರು.