ಸಿದ್ದಾಪುರ, ಡಿ. 28: ಮನೆಯ ಒಳಗೆ ವಿಷಪೂರಿತ ಹಾವೊಂದನ್ನು ಸೆರೆ ಹಿಡಿಯುವಲ್ಲಿ ಉರಗ ಪ್ರೇಮಿ ಸುರೇಶ್ ಯಶಸ್ವಿಯಾಗಿದ್ದಾರೆ. ಗುಹ್ಯ ಗ್ರಾಮದವರಾದ ಸಿದ್ದಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷೆ ರಾಣಿ ನಾರಾಯಣ ಅವರ ಮನೆಯ ಗೋಡೆಯ ಸೆರೆಯಲ್ಲಿ ವಿಷಪೂರಿತ ಹಾವೊಂದು ಕಾಣಿಸಿಕೊಂಡಿದೆ. ಇದರಿಂದ ಮನೆಯವರು ಭಯಭೀತರಾಗಿದ್ದರು. ನಂತರ ಉರಗ ಪ್ರೇಮಿ ಬಿ.ಎಸ್. ಸುರೇಶ್ ಅವರನ್ನು ಸ್ಥಳಕ್ಕೆ ಕರೆಸಿದಾಗ ಹಾವನ್ನು ಸೆರೆ ಹಿಡಿದಿದ್ದಾರೆ. ನಂತರ ಸ್ಥಳೀಯ ಅರಣ್ಯಕ್ಕೆ ಬಿಡಲಾಗಿದೆ. ಈಗಾಗಲೇ ಸುರೇಶ್ ಪೂಜಾರಿ 250 ಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ಸೆರೆ ಹಿಡಿದಿದ್ದಾರೆ.

- ವಾಸು ಎ.ಎನ್