ಮಡಿಕೇರಿ, ಡಿ. 28: ಭಾಗಮಂಡಲದ ಕುದುಕುಳಿ ಮಿಲನ ಭರತ್ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ಚಟುವಟಿಕೆಗಳಿಗಾಗಿ ರಾಜ್ಯಮಟ್ಟದ “ಕುವೆಂಪು ಸಾಹಿತ್ಯ ಪ್ರಶಸ್ತಿ” ದೊರೆತಿದೆ. “ಬೆಳಕು ಶಿಕ್ಷಣ, ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ” ತಾ. 29 ರಂದು (ಇಂದು) ಕುವೆಂಪು ಜನ್ಮ ದಿನದ ಪ್ರಯುಕ್ತ ಮಂಡ್ಯ ಜಿಲ್ಲೆಯಲ್ಲಿ ನಡೆಸುತ್ತಿರುವ “ಪಂಚ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.