ಗೋಣಿಕೊಪ್ಪ ವರದಿ, ಡಿ. 28 : ಬೊಟ್ಯತ್ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಬೊಟ್ಯತ್ನಾಡ್ ಹಾಗೂ ಬೇಗೂರ್ ಈಶ್ವರ ಯೂತ್ ಕ್ಲಬ್ ತಂಡಗಳು ಫೈನಲ್‍ಗೆ ಪ್ರವೇಶ ಪಡೆದವು.
ಸೆಮಿ ಫೈನಲ್ ಪಂದ್ಯಗಳಲ್ಲಿ ಬೇಗೂರ್ ಈಶ್ವರ ಯೂತ್ ಕ್ಲಬ್ ತಂಡವು ವೀರಾಜಪೇಟೆ ಕೊಡವ ಸಮಾಜ ತಂಡವನ್ನು, ಬೊಟ್ಯತ್ನಾಡ್ ತಂಡವು ಡ್ರಿಬ್ಲ್ ಹೆಂಪ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದವು.ಬೇಗೂರ್ ಈಶ್ವರ ಯೂತ್ ಕ್ಲಬ್ ತಂಡವು ವೀರಾಜಪೇಟೆ ಕೊಡವ ಸಮಾಜ ತಂಡದ ವಿರುದ್ಧ 4-1 ಗೋಲುಗಳಿಂದ ಜಯಿಸಿತು. ಬೇಗೂರ್ ಪರ 28, 58 ನೇ ನಿಮಿಷಗಳಲ್ಲಿ ಪೂಣಚ್ಚ 2 ಗೋಲು, 23 ರಲ್ಲಿ ಮಣಿ, 47 ರಲ್ಲಿ ಶೇಷಗೌಡ, ವೀರಾಜಪೇಟೆ ಪರ 59 ನಿಮಿಷದಲ್ಲಿ ಕುಮಾರ್ ಏಕೈಕ ಗೋಲು ಹೊಡೆದರು.(ಮೊದಲ ಪುಟದಿಂದ) ಬೊಟ್ಯತ್ನಾಡ್ ತಂಡವು ಡ್ರಿಬ್ಲ್ ಹೆಂಪ್ ವಿರುದ್ಧ 5-0 ಗೋಲುಗಳ ಭರ್ಜರಿ ಗೆಲುವು ಪಡೆಯಿತು. 10 ಹಾಗೂ 17 ನೇ ನಿಮಿಷಗಳಲ್ಲಿ ಅಂತರ್ರಾಷ್ಟ್ರೀಯ ಆಟಗಾರ ನಿತಿನ್ ತಿಮ್ಮಯ್ಯ 2 ಗೋಲು ಹೊಡೆದು ಮುನ್ನಡೆ ತಂದುಕೊಟ್ಟರು. 44 ರಲ್ಲಿ ಬೋಪಣ್ಣ, 45 ರಲ್ಲಿ ಕುಪ್ಪಂಡ ಸೋಮಯ್ಯ, 58 ರಲ್ಲಿ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ ತಲಾ ಒಂದೊಂದು ಗೋಲು ಹೊಡೆದರು. ಡ್ರಿಬ್ಲ್ ಹೆಂಪ್ ತಂಡವು ಸಾಕಷ್ಟು ಅವಕಾಶಗಳನ್ನು ಕೈಚೆಲ್ಲಿಕೊಂಡು ನಿರಾಸೆ ಅನುಭವಿಸಿತು. ವೀರಾಜಪೇಟೆ