ಮಡಿಕೇರಿ, ಡಿ. 28 : ಮನೆ ಮನೆ ಕಾವ್ಯಗೋಷ್ಠಿ ಪರಿವಾರದ ವತಿಯಿಂದ ಸದಾನಂದ ಪುರೋಹಿತ್, ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿಪ್ರ ಮಹಿಳಾ ಸಂಘದ ಪ್ರ್ರಾಯೋಜಕತ್ವದಲ್ಲಿ ತಾ. 29ರಂದು (ಇಂದು) ಕವಿಗೋಷ್ಠಿ ಏರ್ಪಡಿಸಲಾಗಿದೆ. ತಾ. 29ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪ ಬಳಿಯ ಕೈಕೇರಿಯ ವಿಪ್ರ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗೇಶ್ ಕಾಲೂರು ವಹಿಸಲಿದ್ದಾರೆ.
ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷ ಬಿ.ಜಿ. ಅನಂತಶಯನ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ಕೆ.ಜಿ. ರಾಮಕೃಷ್ನ, ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಶಶಿಧರ್, ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಪಿ.ಎನ್. ಯೋಗೇಶ್, ಗೌರವ ಕಾರ್ಯದರ್ಶಿ ಸದಾನಂದ ಪುರೋಹಿತ್ ಭಾಗವಹಿಸುವರು.