ಮಡಿಕೇರಿ, ಡಿ. 28: ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯ ವಿರುದ್ಧ ಅರಿವು ಮೂಡಿಸುವ ನಿಟ್ಟಿನಲ್ಲಿ; ಸೇವಾಭಾರತಿ ಜಿಲ್ಲಾ ಘಟಕದಿಂದ ಕರಪತ್ರಗಳನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಅಭಿಯಾನ ನಡೆಸಲಾಯಿತು. ಜಿಲ್ಲೆಗೆ ಬರುವ ಮತ್ತು ಹಿಂತೆರಳುವ ಪ್ರವಾಸಿಗಳ ಸಹಿತ ಸಾರ್ವಜನಿಕರಿಗೆ ಈ ಕರಪತ್ರಗಳನ್ನು ಸಂಘಟನೆಯ ಕಾರ್ಯಕರ್ತರು ವಿತರಿಸಿದರು.

ಪ್ರಕೃತಿ ಆರಾಧನೆಯ ಭಾಗವಾಗಿರುವ ನಾಗಾರಾಧನೆ, ಗೋಪೂಜೆ, ವೃಕ್ಷ ಮದುವೆ, ಬಲೀಂದ್ರ ಪೂಜೆ, ತುಳಸಿ ಪೂಜೆ, ಜಲ ಪೂಜೆ ಮುಂತಾದ ಆಚರಣೆಗಳನ್ನು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕøತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಕೃತಿಯ ಸಂರಕ್ಷಣೆಯೇ ಈ ಎಲ್ಲಾ ಆಚರಣೆಗಳ ಹಿಂದಿರುವ ಭಾವವಾಗಿದೆ. ಇಂದು ನಾವು ಪ್ರಕೃತಿಯನ್ನು ಶೋಷಣೆ ಮಾಡುತ್ತಾ ಸಾಗುತ್ತಿದ್ದೇವೆ. ಪರಿಸರದಲ್ಲಿ ಜೀವಿಸುವ ಪಶು, ಪಕ್ಷಿ, ಪ್ರಾಣಿ ಹಾಗೂ ಗಿಡ, ಮರ, ಬಳ್ಳಿಗಳಿಗೆ ಬದುಕುವ ಹಕ್ಕಿದೆ ಎಂದು ತಿಳಿದರೂ ಅವುಗಳ ನಾಶಕ್ಕೆ ನಾಂದಿ ಹಾಡುತ್ತಿದ್ದೇವೆ. ಇಂದು ಪ್ಲಾಸ್ಟಿಕ್ ಮನೆ, ದೇವಸ್ಥಾನ, ಗ್ರಾಮ, ಪಟ್ಟಣ, ನಗರ ಹೀಗೆ ಎಲ್ಲಾ ಕಡೆಗೂ ವ್ಯಾಪಿಸಿದೆ. ಇಡೀ ಜಗತ್ತಿನಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಅತೀ ಹೆಚ್ಚು ಬಳಸುವ ದೇಶವೆಂದರೆ ಭಾರತ. ಪ್ಲಾಸ್ಟಿಕ್ ಉದ್ಯಮವು ಮುಂದುವರೆದ ದೇಶಗಳಲ್ಲಿ 5% ಇದ್ದರೆ, ಭಾರತದಲ್ಲಿ ಅದು 15% ಆಗಿದೆ.

ಪ್ರಕೃತಿ ಸೌಂದರ್ಯದ ಬೀಡು, ಜೀವನದಿ ಕಾವೇರಿಯ ಪುಣ್ಯಭೂಮಿ, ದಕ್ಷಿಣ ಕಾಶಿಯೆಂದು ಪ್ರಸಿದ್ಧಿ ಪಡೆದಿರುವ ಕೊಡಗಿನ ಪ್ರಕೃತಿ - ಪರಿಸರ, ಮಣ್ಣಿನ ಗುಣವೇ ಪ್ಲಾಸ್ಟಿಕ್ ಬಳಕೆಯಿಂದ ನಾಶವಾಗುವತ್ತ ಸಾಗುತ್ತಿದೆ. ಪ್ಲಾಸ್ಟಿಕ್ ಬಳಕೆ - ಉಪಯೋಗದಲ್ಲಿ ಉಂಟಾಗುತ್ತಿರುವ ಹಾನಿಯ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯ ಕಂಡುಬಂದಿದೆ. ಕೊಡಗಿನ ಪ್ರಕೃತಿ ಸೌಂದರ್ಯ, ಮಣ್ಣಿನ ಫಲವತ್ತತೆ ಹಾಗೂ ಆರೋಗ್ಯ ಪೂರ್ಣ ಜೀವನÀಕ್ಕೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸೋಣ.

ಪ್ಲಾಸ್ಟಿಕ್ ದುಷ್ಟರಿಣಾಮಗಳು

ಪ್ಲಾಸ್ಟಿಕ್‍ನ್ನು ಟೈಟಾನಿಯಂ ಡೈಆಕ್ಸೈಡ್ ಮತ್ತು ಕಾಡ್ಮಿಯಂ ಅಥವಾ ಸತುವಿನಿಂದ ಕೂಡಿದ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದನ್ನು ಪದೇ ಪದೇ ಬಳಸುವದರಿಂದ ಎಲುಬುಗಳು ವಿರೂಪಗೊಳ್ಳಲು ಮತ್ತು ಕ್ಯಾನ್ಸರಿಗೆ ಕಾರಣವಾಗುತ್ತದೆ. ಬಣ್ಣ ಬಣ್ಣದ ಪ್ಲಾಸ್ಟಿಕ್ ತಯಾರಿಸಲು ಬೇರೆ ಬೇರೆ ರಾಸಾಯನಿಕಗಳನ್ನು ಬಳಸುತ್ತಾರೆ. ಇದರ ಉಪಯೋಗ ಕೂಡಾ ಮನುಷ್ಯನ ದೇಹಕ್ಕೆ ಮಾರಕ ವಿಷವಾಗಿ ಪರಿಣಮಿಸುತ್ತದೆ.

ಪ್ಲಾಸ್ಟಿಕ್‍ಗೆ ಬಳಕೆಯಾಗುವ ವಿಷಕಾರಿ ರಾಸಾಯನಿಕಗಳು ದೇಹದಲ್ಲಿ ಶೇಖರಗೊಂಡು ಲಿವರ್ ಕ್ಯಾನ್ಸರ್, ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ಲೋಟ, ತಟ್ಟೆಗಳಲ್ಲಿ ಆಹಾರ ಸೇವಿಸುವದರಿಂದ ಅದರಲ್ಲಿರುವ ಮೊನೋಮಸ್ ರಾಸಾಯನಿಕವು ಆಹಾರವನ್ನು ಹೀರಿಕೊಳ್ಳುವುದರಿಂದ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಪ್ಲಾಸ್ಟಿಕ್ ಚೀಲಗಳನ್ನು ಸುಡುವಾಗ ಹೊರಬರುವ ಪೋಸ್ಟಿನ್, ಕಾರ್ಬನ್ ಮೊನೊಕ್ಸೈಡ್, ಕ್ಲೋರಿನ್, ಸಿಲ್ವರ್ ಡೈಆಕ್ಸೈಡ್ ಮೊದಲಾದವುಗಳು ವಿಷಾನಿಲವೇ ಆಗಿದೆ. ವಿಷಾನಿಲವು ಗಾಳಿಯಲ್ಲಿ ಸೇರಿಕೊಂಡು ಪ್ರಾಣಿ, ಪಕ್ಷಿ ಹಾಗೂ ಮನುಷ್ಯರಿಗೆ ಮಾರಕವಾಗುತ್ತದೆ. ಪ್ಲಾಸ್ಟಿಕ್ ಸುಡುವಾಗ ಹೊರಸೂಸುವ ಹೊಗೆ ಶ್ವಾಸನಾಳದ ಮೂಲಕ ಶರೀರ ಪ್ರವೇಶಿಸಿ ಸ್ತ್ರೀಯರಿಗೆ ಬಂಜೆತನ, ಗರ್ಭಪಾತ ಅಥವಾ ವಿಕಲಾಂಗ ಮಗುವಿನ ಜನನಕ್ಕೆ ಕಾರಣವಾಗುವುದು. ಎಲುಬು, ಉಗುರು, ಕೂದಲು ಮೊದಲಾದವುಗಳ ಬೆಳವಣಿಗೆ ಕುಂಠಿತವಾಗಬಹುದು. ಬುದ್ಧಿಮಾಂದ್ಯತೆ, ಚರ್ಮವ್ಯಾಧಿ ಇತ್ಯಾದಿಗಳು ಬರಬಹುದು.

ಪ್ಲಾಸ್ಟಿಕ್‍ನ್ನು ಕಂಡಕಂಡಲ್ಲಿ ಎಸೆಯಬೇಡಿ, ಇದು ಗಾಳಿಯಲ್ಲಿ ಹರಡಿ ಬಾವಿ, ಕೆರೆ, ಹರಿದು ಬರುವ ನೀರಿನ ಒರತೆಯನ್ನು ತಡೆಯುತ್ತದೆ. ನಗರದ ಚರಂಡಿ ಪೈಪುಗಳಲ್ಲಿ ಶೇಖರಣೆÀಗೊಂಡು ನೀರು ಸರಾಗವಾಗಿ ಹರಿಯಲು ತೊಂದರೆಯಾಗಿ ನೀರಿನಲ್ಲಿ ಕೊಳೆತು ಹಲವು ರೋಗರುಜಿನಗಳಿಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ಚೀಲಗಳಲ್ಲಿ ಮನೆಯಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಹಾಕಿ ಎಸೆಯಬೇಡಿ. ಅವುಗಳನ್ನು ಪ್ರಾಣಿ - ಪಕ್ಷಿಗಳು ತಿಂದು ಅವುಗಳ ಪ್ರಾಣಕ್ಕೆ ಅಪಾಯವಾಗಬಹುದು. ಮಣ್ಣಿನ ಫಲವತ್ತತೆಯೂ ಕಡಿಮೆಯಾಗಬಹುದು. ಪ್ಲಾಸ್ಟಿಕ್‍ನಿಂದ ತೊಂದರೆಯೇ ಜಾಸ್ತಿ. ಆದುದರಿಂದ ಅದನ್ನು ತ್ಯಜಿಸೋಣ, ಪೇಟೆಯಿಂದ ಮನೆಗೆ ಪ್ಲಾಸ್ಟಿಕ್ ಬರುವದನ್ನು ನಿಲ್ಲಿಸೋಣ, ಬಟ್ಟೆ ಚೀಲಗಳನ್ನು ಉಪಯೋಗಿಸೋಣ, ಪ್ರಕೃತ್ತಿಯನ್ನು ಉಳಿಸೋಣ, ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಾಣ ಮಾಡೋಣ, ಆರೋಗ್ಯ ಭಾಗ್ಯ ಎಂಬ ಸಂದೇಶವನ್ನು ಕರಪತ್ರಗಳ ಮೂಲಕ ಸಾರಲಾಯಿತು.