ಮಡಿಕೇರಿ, ಡಿ. 28 : ಸೋಮವಾರಪೇಟೆ ತಾಲೂಕು ಅಭ್ಯತ್‍ಮಂಗಲ ಗ್ರಾಮದ ಸರ್ವೆ ನಂ. 87/2ರ ಜಾಗದಲ್ಲಿ ಕಾವೇರಿ ನದಿಯ ಬದಿಯಲ್ಲಿರುವ ಹಲವಾರು ಕಡೆ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಉದ್ದೇಶಿಸಿರುವ ಜಾಗದಲ್ಲಿರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ಪ್ರಸ್ತಾವನೆ ಬಂದಿದ್ದು, ಈ ಬಗ್ಗೆ ವಲಯ ಅರಣ್ಯಾಧಿಕಾರಿ, ಕುಶಾಲನಗರ ವಲಯ, ಕುಶಾಲನಗರ ಅವರು ನಾಟಕ್ಕೆ ಯೋಗ್ಯವಾದ ವಿವಿಧ ಜಾತಿಯ ಒಟ್ಟು 192 ಹಸಿ ನಿಂತ ಮರಗಳಿಂದ ಅಂದಾಜು 139.77 ಘ.ಮೀ. ಇರುವುದಾಗಿ ಹಾಗೂ ಸೌದೆಗೆ ಯೋಗ್ಯವಾದ ವಿವಿಧ ಜಾತಿಯ ಒಟ್ಟು 147 ಮರಗಳಿಂದ ಅಂದಾಜು 80.600 ಘ.ಮೀ. ಸೌದೆ ದೊರೆಯಬಹುದಾಗಿ ವರದಿ ನೀಡಿರುತ್ತಾರೆ. ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ (ಕೆಪಿಟಿ ಆಕ್ಟ್ ಸೆಕ್ಷನ್-8(vii) ನಿಯಮದಡಿ 50ಕ್ಕೂ ಹೆಚ್ಚಿನ ಯಾವುದೇ ಸಾರ್ವಜನಿಕ ಉದ್ದೇಶಕ್ಕೆ ತೆರವುಗೊಳಿಸಲು ಸಾರ್ವಜನಿಕರಿಂದ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ.
ಅಂದು ಬೆಳಗ್ಗೆ 11 ಗಂಟೆಗೆ ನಗರದ ಅರಣ್ಯ ಭವನ ಕಚೇರಿಯ 2ನೇ ಮಹಡಿ ಸಭಾಂಗಣದಲ್ಲಿ ಸಾರ್ವಜನಿಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆಸಕ್ತ ಸಾರ್ವಜನಿಕರು ಪಾಲ್ಗೊಂಡು ಮರ ತೆರವಿನ ಕಾಮಗಾರಿಯನ್ನು ಮುಂದುವರೆಸುವ ಬಗ್ಗೆ ಅಭಿಪ್ರಾಯ ನೀಡಬಹುದು ಅಥವಾ ಲಿಖಿತ ರೂಪದಲ್ಲಿಯೂ ಸೂಕ್ತ ಅಭಿಪ್ರಾಯವನ್ನು ಒಂದು ವಾರದೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಕಚೇರಿಗೆ ನೀಡಬಹುದು. ಹೆಚ್ಚಿನ ಮಾಹಿತಿಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.