ಮಡಿಕೇರಿ, ಡಿ.28: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ರಂಗಮನೆ ಸಾಂಸ್ಕøತಿಕ ಕಲಾ ಕೇಂದ್ರದಲ್ಲಿ 20 ದಿನಗಳ “ಅರೆಭಾಷೆ ರಂಗ ತರಬೇತಿ ಶಿಬಿರ” ಜರುಗಲಿದೆ.
ರಂಗಮಾಂತ್ರಿಕ ಜೀವನ್ ರಾಮ್ ಸುಳ್ಯ ನಿರ್ದೇಶನದಲ್ಲಿ ನಡೆಯುವ ಶಿಬಿರದಲ್ಲಿ ಅಭಿನಯ, ಮಾತುಗಾರಿಕೆ, ರಂಗ ವ್ಯಾಯಾಮ, ಸ್ವರಸಂಸ್ಕಾರ, ರಂಗ ತಾಂತ್ರಿಕತೆ, ವಸ್ತ್ರ ವಿನ್ಯಾಸ, ಬೆಳಕು ಸಂಯೋಜನೆ, ಪ್ರಸಾಧನ ಹಾಗೂ ಅರೆಭಾಷಾ ಸಾಹಿತ್ಯ ಕಲಿಕೆ ಮಾತ್ರವಲ್ಲದೆ ಪ್ರಸಿದ್ಧ ನಾಟಕವೊಂದರ ಅಭ್ಯಾಸವೂ ಒಳಗೊಂಡಿದೆ.
ಶಿಬಿರದಲ್ಲಿ ಸಿದ್ದಗೊಂಡ ನಾಟಕದ ಪ್ರದರ್ಶನವನ್ನು ರಾಜ್ಯದ ಆಯ್ದ ಮುಖ್ಯ ನಗರಗಳಲ್ಲಿ ಅಕಾಡೆಮಿಯು ಏರ್ಪಡಿಸಲಿದೆ. ಶಿಬಿರದಲ್ಲಿ ಭಾಗವಹಿಸಲು ಕೇವಲ 20 ಮಂದಿ ಕಲಾವಿದರಿಗೆ ಮಾತ್ರ ಅವಕಾಶವಿದ್ದು, 18 ರಿಂದ 30 ವರ್ಷದೊಳಗಿನ ಆಸಕ್ತರು ಜನವರಿ, 06 ರೊಳಗೆ ಇತ್ತೀಚಿನ ಭಾವಚಿತ್ರ ಹಾಗೂ ಸ್ವ ವಿವರಗಳೊಂದಿಗೆ ಅರೆಭಾಷೆ, ರಂಗ ಶಿಬಿರ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಮಡಿಕೇರಿ ಈ ವಿಳಾಸಕ್ಕೆ ಸಲ್ಲಿಸಬೇಕು. ಸಂದರ್ಶನ ದಿನಾಂಕವನ್ನು ದೂರವಾಣಿ ಮೂಲಕ ತಿಳಿಸಲಾಗುವುದು. ಆಯ್ಕೆಯಾದವರಿಗೆ ತರಬೇತಿಯು ಸಂಪೂರ್ಣ ಉಚಿತವಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ, ಇಲ್ಲಿ ಅರ್ಜಿ ಪಡೆದುಕೊಳ್ಳಬಹುದು. ದೂ: 08272-223055 ನ್ನು ಸಂಪರ್ಕಿಸಬಹುದು.