ವೀರಾಜಪೇಟೆ, ಡಿ. 28: ಮೈಸೂರಿನ ಯುವರಾಜ ಕ್ರೀಡಾಂಗಣದಲ್ಲಿ ನಡೆದ ನ್ಯಾಷನಲ್ ಓಪನ್ ಚಾಂಪಿಯನ್ ಶಿಪ್ ಕರಾಟೆಯಲ್ಲಿ ಇಲ್ಲಿನ ರೋಟರಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಪಿ. ಅಭಿನವ್, ಸಂತ ಅನ್ನಮ್ಮ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಟಿ.ಯು. ಅವತಿಕ ಹಾಗೂ ಆರನೇ ತರಗತಿಯ ವಿದ್ಯಾರ್ಥಿ ಟಿ.ಯು. ಆಕಾಶ್ ಕತ ಮತ್ತು ಕುಮಿತ್‍ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಪಡೆದಿದ್ದಾರೆ.

ಅಭಿನವ್, ಕೆ.ಪಿ. ಸಜೀಶ್, ಸಂಧ್ಯಾ ದಂಪತಿ ಪುತ್ರನಾಗಿದ್ದರೆ ಆಕಾಶ್ ಹಾಗೂ ಅವತಿಕ, ಉಮೇಶ್, ಪುಷ್ಪಾ ದಂಪತಿಯ ಮಕ್ಕಳು. ಕರಾಟೆ ಶಿಕ್ಷಕ ಎಂ.ಬಿ. ಚಂದ್ರನ್ ತರಬೇತಿ ನೀಡಿದ್ದಾರೆ.