ಮಡಿಕೇರಿ, ಡಿ. 27: ಸುದರ್ಶನ ಗೌಡ ಕೂಟದ 13ನೇ ವಾರ್ಷಿಕ ಸಭೆ ಮತ್ತು ಸಂತೋಷಕೂಟ ತಾ. 29ರಂದು (ನಾಳೆ) ಬೆಳಿಗ್ಗೆ 9.30ಕ್ಕೆ ಮಡಿಕೇರಿಯ ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಸುದರ್ಶನ ಗೌಡ ಕೂಟದ ಅಧ್ಯಕ್ಷ ಪಾಣತ್ತಲೆ ಬಿದ್ದಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ನಿವೃತ್ತ ಜಂಟಿ ಆಯುಕ್ತ ಪಾಣತ್ತಲೆ ಪಳಂಗಪ್ಪ ಮತ್ತು ಅತಿಥಿಗಳಾಗಿ ಉದ್ಯಮಿ ಅಂಬೆಕಲ್ಲು ಕುಶಾಲಪ್ಪ ಭಾಗವಹಿಸಲಿದ್ದಾರೆ ಎಂದು ಕೂಟದ ಕಾರ್ಯದರ್ಶಿ ಬಳಪದ ಮಂದಣ್ಣ ತಿಳಿಸಿದ್ದಾರೆ.