ಇತ್ತೀಚೆಗಷ್ಟೇ ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗೂ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗಿತ್ತು. ಈ ಸಂದರ್ಭ ಸ್ವತಃ ಆರೋಗ್ಯ ಸಚಿವ ಶ್ರೀ ರಾಮುಲು ಜಿಲ್ಲೆಗೆ ಭೇಟಿ ನೀಡಿಯೂ ಇದ್ದರು. ಆದರೆ ಇದುವರೆಗೂ ಜಿಲ್ಲೆಯ ಜನತೆಯ ಈ ಕೂಗಿಗೆ ಸಕರಾತ್ಮಕ ಸ್ಪಂದನೆ ಮಾತ್ರ ದೊರೆತಿಲ್ಲ. ಕೊಡಗು ಜಿಲ್ಲೆಯಲ್ಲಿ ಬಹಳಷ್ಟು ಆಸ್ಪತ್ರೆಗಳಿದ್ದರೂ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಇವುಗಳಿಂದ ರೋಗಿಗಳಿಗೆ ತುರ್ತಾಗಿ ಸಿಗಬೇಕಿದ್ದ ಅಗತ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ಚಿಕಿತ್ಸೆ ಸಿಗುತ್ತಿಲ್ಲ ಎಂಬ ಕೊರಗು ಜಿಲ್ಲೆಯ ಜನತೆಯಲ್ಲಿದೆ. ಈ ರೀತಿಯ ಕೊರತೆ ಕೊಡಗಿನ ಜನತೆಯನ್ನು ಬಹಳ ವರ್ಷಗಳಿಂದ ಬಹುವಾಗಿ ಕಾಡುತ್ತಿದೆ. ಮುಖ್ಯವಾಗಿ ಕೊಡಗಿನಲ್ಲಿ ಇರುವ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯವಿರುವ ಸೌಲಭ್ಯಗಳ ಹಾಗೂ ಉಪಕರಣಗಳ ವ್ಯವಸ್ಥೆಗಳಿಲ್ಲ. ಸುಸಜ್ಜಿತವಾಗಿಲ್ಲ, ಇದರಿಂದ ಕೇವಲ ಪ್ರಥಮ ಚಿಕಿತ್ಸೆಗಷ್ಟೇ ಮೀಸಲಾಗಿವೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರು, ಮಂಗಳೂರು ಅಥವಾ ಬೆಂಗಳೂರು ಮತ್ತಿತರ ಊರುಗಳಿಗೆ ತೆರಳ ಬೇಕಾಗಿರುತಿತ್ತು ಅಲ್ಲದೆ, ವೈದ್ಯಾಧಿಕಾರಿಗಳು ಕೂಡ ಜವಾಬ್ದಾರಿಯಿಂದ ನುಣುಚಿಕೊಂಡು ಹೊರಗೆ ಕಳುಹಿಸುತ್ತಿರುವುದನ್ನು ಕಾಣಬಹುದು.

ಯಾವೆಲ್ಲ ವ್ಯವಸ್ಥೆಗಳಿರುತ್ತದೆ ?: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಪಕರಣಗಳೊಂದಿಗೆ ಸಕಲ ವ್ಯವಸ್ಥೆಗಳಿರುತ್ತವೆ. ಒಂದು ರೀತಿಯಲ್ಲಿ ಕೊಡಗಿಗೆ ವರದಾನದಂತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ದೊಡ್ಡ ಮಟ್ಟಿನ ಹೆಚ್ಚಿನ ಅನುಕೂಲವಾಗಲಿದೆ. ಹೊರ ಜಿಲ್ಲೆಗಳಿಗೆ ತೆರಳುವ ಬದಲು ಕೊಡಗಿನಲ್ಲೇ ಇರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳ ಬಹುದು. ಮೈಸೂರು, ಮಂಗಳೂರು ಅಥವಾ ಇನ್ನಿತರ ಹೊರ ಊರು ಗಳಿಗೆ ತೆರಳುವ, ಹೆಚ್ಚಿನ ಹಣ ವೆಚ್ಚ ಮಾಡುವ ಪ್ರಮೇಯ ಇರಲಾರದು. ಹೊರ ಜಿಲ್ಲೆಗಳಿಗೆ ತೆರಳಿ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆ ಮತ್ತಿತರ ಚಿಕಿತ್ಸೆಗಳಿಗೆ ತಗಲುವ ವೆಚ್ಚದೊಂದಿಗೆ ರೋಗಿಗಳೊಂದಿಗೆ ತೆರಳುವವರ ಉಳಿಯುವಿಕೆ, ಊಟ, ವಸತಿ ಮತ್ತು ಉಪಹಾರ ವೆಚ್ಚಗಳು ಉಳಿತಾಯವಾಗಲಿದೆ ಅಥವಾ ಅದೇ ಹಣವನ್ನು ಇಲ್ಲೇ ವೆಚ್ಚ ಮಾಡಬಹುದು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಲ್ಲ ಎಂಬ ಉತ್ತರ ಬರಲಾರದು, ಈ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ, ತುರ್ತು ಚಿಕಿತ್ಸೆಯಂತಹ ಘಟಕಗಳು ಇರುವುದು ಸಹಜ. ಇದರೊಂದಿಗೆ ಅತ್ಯಾಧುನಿಕ ಮಾದರಿಯ ಉಪಕರಣ ಗಳು ಮತ್ತು ಎಲ್ಲಾ ರೀತಿಯ ವ್ಯವಸ್ಥೆಗಳು ಇರುತ್ತದೆ. ಇನ್ನೂ ಕೊಡಗು ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾದರೆ ಮಡಿಕೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯೊಂದಿಗೆ ಸಂಯೋಜಿಸಲುಬಹುದು, ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯರಿಗೂ ಅನುಕೂಲವಾಗಲಿದೆ. ಮುಖ್ಯವಾಗಿ ಐಚಿಠಿಚಿಡಿosಛಿoಠಿಥಿ/ ಊಥಿsಣeಡಿosಛಿoಠಿiಛಿ Suಡಿgeಡಿಥಿ (ಲೆಪರೊಸ್ಕೋಪಿ, ಹೈಸ್ಟರೊಸ್ಕೋಪಿಕ್ ಸರ್ಜರಿ),Uಟಣಡಿಚಿsouಟಿಜ Sಛಿಚಿಟಿಟಿiಟಿg (ಅಲ್ಟ್ರಾ ಸೌಂಡ್ ಸ್ಕಾನಿಂಗ್), Iಟಿಜಿeಡಿಣiಟiಣಥಿ ಛಿಟiಟಿiಛಿ (ಇನ್ಫರ್ಟಿಲಿಟಿ ಕ್ಲಿನಿಕ್) ಹಿರಿಯರ ಮತ್ತು ಕಿರಿಯರ ಪ್ರತ್ಯೇಕ IಅU (ಐಸಿಯು ಘಟಕ), ಆiಚಿಟಥಿsis Uಟಿiಣ (ಡಯಾಲಿಸಿಸ್ ಘಟಕ), ಅosmeಣoಟogಥಿ (ಕಾಸ್ಮೆಟೊಲಾಜಿ), ರಿoiಟಿಣ ಖeಠಿಟಚಿಛಿemeಟಿಣ/ಂಡಿಣhಡಿosಛಿoಠಿಥಿ (ಮಂಡಿಚಿಪ್ ಮರುಜೋಡಣೆ/ಆರ್ಥೋಸ್ಕೋಫಿ), ಖಿಡಿಚಿumಚಿ ಚಿಟಿಜ ಂಛಿಛಿiಜeಟಿಣ ಅಚಿಡಿe (ಟ್ರೂಮಾ ಮತ್ತು ಆ್ಯಕ್ಸಿಡೆಂಟ್ ಕೇರ್, ಹೃದ್ರೋಗ) ಘಟಕಗಳೊಂದಿಗೆ ನುರಿತ ತಜ್ಞ ವೈದ್ಯಾಧಿಕಾರಿಗಳು, ತಜ್ಞರು ಇರುತ್ತಾರೆ.

ಈ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಸಂಪೂರ್ಣ ನಿರ್ವಹಣೆ ಮತ್ತು ಜವಾಬ್ದಾರಿಯನ್ನು ನೋಡಿಕೊಳ್ಳಲು ಓರ್ವ ಪಾರದರ್ಶಕವುಳ್ಳ ಮೇನೆಜಿಂಗ್ ಡೈರೆಕ್ಟರ್‍ನ ಅಗತ್ಯವಿದ್ದು, ಇವರು ತಜ್ಞ ವೈದ್ಯಾಧಿಕಾರಿಯಾಗಿ ಆಸ್ಪತ್ರೆಯ ಎಲ್ಲಾ ಆಗು-ಹೋಗುಗಳನ್ನು ನೋಡಿಕೊಳ್ಳಲಿದ್ದಾರೆ. ಇವರೊಂದಿಗೆ ಹೃದ್ರೋಗ ತಜ್ಞ, ಚರ್ಮ ತಜ್ಞ, ಎಎನ್‍ಟಿ ತಜ್ಞರು, ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ನವಜಾತ ಶಿಶು ರೋಗ ತಜ್ಞರು, ಜಠರ ಮತ್ತು ಅನ್ನನಾಳ ತಜ್ಞರು, ತುರ್ತು ಚಿಕಿತ್ಸಕರು ಮತ್ತು ಅರವಳಿಕೆ ತಜ್ಞರು, ಲೆಪ್ರೋಸ್ಕೋಪಿಕ್, ಸಾಮಾನ್ಯ ವೈದ್ಯರುಗಳು, ಮೂತ್ರಪಿಂಡ ಶಾಸ್ತ್ರಜ್ಞರು, ಮೂಳೆ ತಜ್ಞರು, ಮೂತ್ರ ಶಾಸ್ತ್ರಜ್ಞರು, ನರಶಾಸ್ತ್ರ ತಜ್ಞರು, ಗ್ರಂಥಿ ಶಾಸ್ತ್ರಜ್ಞರು, ಶ್ವಾಸಕೋಶ ಶಾಸ್ತ್ರಜ್ಞರು,ಅನ್ನ ನಾಳ ಸರ್ಜನರು ಇನ್ನೂ ತುರ್ತು ಹಾಗೂ ಅಗತ್ಯ ತಜ್ಞರುಗಳು ಇರುತ್ತಾರೆ.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇರೆ ಬೇರೆ ರೋಗಗಳಿಗೆ ಮತ್ತು ಘಟನೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಆಪರೇಷನ್ ಥಿಯೇಟರ್ ಗಳಿರಬೇಕು, ಹಾಗಿದ್ದಾಗ ಒಬ್ಬರ ಕಾಯಿಲೆ ಮತ್ತೊಬ್ಬರಿಗೆ ಹರಡುವುದಿಲ್ಲ. ಇದಕ್ಕಾಗಿ ಪ್ರತ್ಯೇಕವಾಗಿ ತಜ್ಞ ವೈದ್ಯರುಗಳು, ತಂತ್ರಜ್ಞರು ಮತ್ತು ಸಿಬ್ಬಂದಿಗಳು ಇರಬೇಕಾಗುತ್ತದೆ. ಇದರೊಂದಿಗೆ ಪ್ರತ್ಯೇಕವಾಗಿ ವ್ಯವಸ್ಥಿತ ಲ್ಯಾಬೋರೇಟರಿ ಗಳು ಕೂಡ ಇರಬೇಕಾಗುತ್ತದೆ. ಈ ಎಲ್ಲಾ ಪ್ರತ್ಯೇಕ ಆಪರೇಷನ್ ಥಿಯೇಟರ್‍ಗಳು ಮತ್ತು ಲ್ಯಾಬೋರೇಟರಿಗಳು ಇದ್ದದ್ದೇ ಆದರೆ ಒಬ್ಬರ ಕಾಯಿಲೆಯ ವರದಿಗಳು ಅದಲು-ಬದಲಾಗುವ ಪ್ರಮೆಯ ಇರಲಾರದು. ನೈಜ ಫಲಿತಾಂಶಗಳು ಆಯಾ ರೋಗಿಗಳಿಗೆ ಲಭ್ಯವಾಗು ತ್ತದೆ. ಇದರಿಂದ ಯಾರಿಗೂ ಅನುಮಾನ ಉಂಟಾಗುವುದಿಲ್ಲ.

-ಬೊಳ್ಳಜಿರ ಬಿ. ಅಯ್ಯಪ್ಪ